ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿಯಲ್ಲಿ ಬಂಗಾರಪ್ಪ , ಅಂಬಿ
ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿಯಲ್ಲಿ ಬಂಗಾರಪ್ಪ , ಅಂಬಿ
ಕೆಪಿಸಿಸಿಯಿಂದ ಕೆಲ ಸಂಭನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧ
ಕೆಲವು ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ :
ಬೆಂಗಳೂರು ಉತ್ತರ - ಸಿ.ಕೆ.ಜಾಫರ್ ಷರೀಫ್
ಕೋಲಾರ- ಕೆ.ಎಚ್.ಮುನಿಯಪ್ಪ
ಮಂಗಳೂರು- ಎಂ.ವೀರಪ್ಪ ಮೊಯಿಲಿ
ಮೈಸೂರು- ಶ್ರೀಕಂಠದತ್ತ ಒಡೆಯರ್
ಮಂಡ್ಯ- ಅಂಬರೀಶ್
ಚಿಕ್ಕಮಗಳೂರು- ಬಿ.ಎಲ್.ಶಂಕರ್
ತುಮಕೂರು- ಜಿ.ಎಸ್.ಬಸವರಾಜು
ಉಡುಪಿ- ವಿನಯಕುಮಾರ್ ಸೊರಕೆ.
ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೆಪಿಸಿಸಿ ಚುನಾವಣಾ ಸಮಿತಿ ಲೋಕಸಭಾ ಅಭ್ಯರ್ಥಿಗಳ ಸಂಭವನೀಯ ಪಟ್ಟಿಯನ್ನು ಸಿದ್ಧಪಡಿಸಿತು. ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಸಚಿವರಾದ ಡಿ.ಕೆ.ಶಿವಕುಮಾರ್, ಮೋಟಮ್ಮ, ಅಲ್ಲಂ ವೀರಭದ್ರಪ್ಪ , ಎಂ.ಮಹಾದೇವು, ಸುಮಾ ವಸಂತ್, ಮಲ್ಲಿಕಾರ್ಜುನ ಖರ್ಗೆ, ಎಚ್.ಸಿ.ಶ್ರೀಕಂಠಯ್ಯ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಸದ್ಯದಲ್ಲೇ ಇತ್ಯರ್ಥಪಡಿಸಲಿದೆ. ಈ ಪಟ್ಟಿ ತಾತ್ಕಾಲಿಕವಾಗಿದ್ದು , ಅಂತಿಮ ಪಟ್ಟಿ ಸೋನಿಯಾ ಅವರ ಒಪ್ಪಿಗೆಯ ಮೇಲೆ ನಿರ್ಧಾರವಾಗಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications