ನೌಕರರ ಸಂಪು : ಬ್ಯಾಂಕ್‌ ಸೇವೆ ಅಸ್ತವ್ಯಸ್ತ , ರಸ್ತೆಗಿಳಿಯದ ಆಟೊ

ನೌಕರರ ಸಂಪು : ಬ್ಯಾಂಕ್‌ ಸೇವೆ ಅಸ್ತವ್ಯಸ್ತ , ರಸ್ತೆಗಿಳಿಯದ ಆಟೊ
ಕಪ್ಪು ಪಟ್ಟಿ ಧರಿಸಿ ಕಚೇರಿಗೆ ಬಂದ ರಾಜ್ಯದ ಸರ್ಕಾರಿ ನೌಕರರು

ಬೆಂಗಳೂರು : ಕೇಂದ್ರ ಮತ್ತು ರಾಜ್ಯಸರಕಾರಗಳ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಿ ಹಾಗೂ ಸರಕಾರಿ ನೌಕರರಿಗೆ ಮುಷ್ಕರದ ಹಕ್ಕನ್ನು ನಿರಾಕರಿಸಿರುವ ಸುಪ್ರೀಮ್‌ ಕೋರ್ಟ್‌ ಆದೇಶ ಪರಿಶೀಲಿಸುವಂತೆ ಒತ್ತಾಯಿಸಿ, ಕಾರ್ಮಿಕ ಮತ್ತು ನೌಕರರ ಸಂಘಟನೆಗಳು ಕರೆ ನೀಡಿದ ರಾಷ್ಟ್ರಾದ್ಯಂತ ಮುಷ್ಕರಕ್ಕೆ (ಫೆ.24ರ ಗುರುವಾರ) ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಬ್ಯಾಂಕ್‌ ಮತ್ತು ವಿಮಾ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದು , ಬ್ಯಾಂಕಿಂಗ್‌ ಸೇವೆ ಅಸ್ತವ್ಯಸ್ತಗೊಂಡಿದೆ. ಬೆಂಗಳರಿನ ಕೆನರಾ ಬ್ಯಾಂಕ್‌ ಮತ್ತು ವಿಜಯ ಬ್ಯಾಂಕ್‌ ಕೇಂದ್ರ ಕಛೇರಿಯಲ್ಲಿ ಮಂಗಳವಾರ ಜನಸಂದಣಿಯ ದಟ್ಟಣೆಯಿರಲಿಲ್ಲ. ಸ್ಟೇಟ್‌ ಬ್ಯಾಂಕ್‌ ಆಪ್‌ ಮೈಸೂರು ಕೇಂದ್ರ ಕಛೇರಿ ಮುಂದೆ ಮುಷ್ಕರ ನಿರತ ನೌಕರರ ಪ್ರತಿಭಟನಾ ಸಭೆ ನಡೆಯಿತು.

ಬಿಜೆಪಿಯ ಭಾರತ್‌ ಮಜ್ದೂರ್‌ ಸಂಘ ಮತ್ತು ಕಾಂಗ್ರೆಸ್‌ನ ಇಂಟೆಕ್‌ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ. ಕೆಲವು ಬ್ಯಾಂಕ್‌ಗಳು ಇಂದಿನ ಮಟ್ಟಿಗೆ ಬಾಗಿಲು ಮುಚ್ಚಿದ್ದವು. ಶಿಕ್ಷಕರು ಹಾಗೂ ರಾಜ್ಯ ಸರಕಾರಿ ನೌಕರರು ಕಚೇರಿಗೆ ಬಂದರಾದರೂ, ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲವಿತ್ತರು.

ಮಂಗಳೂರಿನಲ್ಲಿ ಮುಷ್ಕರಕ್ಕೆ ಉತ್ತಮ ಬೆಂಬಲ ದೊರೆತಿದೆ. ಜಿಲ್ಲಾ ಪಂಚಾಯತ್‌ ಹಾಗೂ ಮಂಗಳೂರು ಮಹಾನಗರ ಪಾಲಿಕೆಯೂ ಮುಷ್ಕರದಲ್ಲಿ ಪಾಲ್ಗೊಂಡಿವೆ.

ಬೆಂಗಳೂರಿನ 60,000ಕ್ಕೂ ಹೆಚ್ಚಿನ ರಿಕ್ಷಾಚಾಲಕರು ಗ್ಯಾಸ್‌ ಕಿಟ್‌ ಅಳವಡಿಕೆ ವಿರೋಧಿಸಿ ಇಂದು ಮುಷ್ಕರದಲ್ಲಿ ಪಾಲ್ಗೊಂಡರು. ಉಳಿದಂತೆ ಕೋಲ್ಕತ್ತ, ಚೆನ್ನೈ, ಗುಜರಾತ್‌, ಆಂಧ್ರ ಪ್ರದೇಶ ಮುಂತಾದೆಡೆ ಮುಷ್ಕರಕ್ಕೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+