ರವೀಂದ್ರ: ಸಾಂಗ್ಲಿಯಾನ, ಮಟ್ಟೆಣ್ಣ ನಂತರ ಬಿಜೆಪಿ ಭರ್ಜರಿಬೇಟೆ
ರವೀಂದ್ರ: ಸಾಂಗ್ಲಿಯಾನ, ಮಟ್ಟೆಣ್ಣ ನಂತರ ಬಿಜೆಪಿ ಭರ್ಜರಿಬೇಟೆ
ದಕ್ಷ-ಜನಪ್ರಿಯ ನಿವೃತ್ತ ಅಧಿಕಾರಿ ರವೀಂದ್ರ ಬಿಜೆಪಿಗೆ ಸೇರ್ಪಡೆ
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಸಾಧನೆಗಳಿಂದ ಪ್ರೇರಿತವಾಗಿ ರವೀಂದ್ರ ಪಕ್ಷ ಸೇರಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ರವೀಂದ್ರ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಅನಂತಕುಮಾರ್ ಮಾತನಾಡುತ್ತಿದ್ದರು.
37 ವರ್ಷಗಳ ಸಾರ್ವಜನಿಕ ಜೀವನದಲ್ಲಿ ರವೀಂದ್ರ ಅಪಾರ ಅನುಭವ ಪಡೆದಿದ್ದಾರೆ. ಅವರ ಅನುಭವ ಪಕ್ಷದ ಸಿದ್ಧಾಂತಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ ಎಂದು ಅನಂತಕುಮಾರ್ ಹೇಳಿದರು.
ಬಿಜೆಪಿಯ ಕೇಂದ್ರ ನಾಯಕತ್ವ ಅತ್ಯುತ್ತಮ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ರವೀಂದ್ರ ಬಣ್ಣಿಸಿದರು. ವಿದ್ಯಾವಂತರು ಹಾಗೂ ಬುದ್ಧಿಜೀವಿಗಳು ರಾಜಕೀಯ ಪ್ರವೇಶಿಸುವ ಮೂಲ, ರಾಜಕಾರಣದ ವಾತಾವರಣವನ್ನು ಸುಧಾರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಬಿಜೆಪಿಯ ಕೇಂದ್ರ ನಾಯಕತ್ವ ಅನೇಕ ನಿರೀಕ್ಷೆಗಳನ್ನು ಮೂಡಿಸಿದೆ. ಭವಿಷ್ಯದ ಬಗ್ಗೆ ಆಶಾ ಭಾವನೆಯನ್ನು ಮೂಡಿಸಿದೆ. ಪ್ರಮುಖ ಆರ್ಥಿಕ ನಿಲುವುಗಳ ಮೂಲಕ ಜಾಗತಿಕ ಗಮನ ಸೆಳೆದಿದೆ. ಅನಕ್ಷರತೆ, ನಿರುದ್ಯೋಗ ಹಾಗೂ ಬಡತನ ತೊಡೆದು ಹಾಕುವ ನಿಟ್ಟಿನಲ್ಲೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ರವೀಂದ್ರ ಬಣ್ಣಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications