‘ಬಿಎಟಿಎಫ್’ಗೊಬ್ಬ ಅಣ್ಣ ; ಎಸ್ಸೆಂ.ಕೃಷ್ಣ ನೇತೃತ್ವದಲ್ಲಿ ‘ಕೆಎಟಿಎಫ್’
‘ಬಿಎಟಿಎಫ್’ಗೊಬ್ಬ ಅಣ್ಣ ; ಎಸ್ಸೆಂ.ಕೃಷ್ಣ ನೇತೃತ್ವದಲ್ಲಿ ‘ಕೆಎಟಿಎಫ್’
ನೂತನ ಕಾರ್ಯಪಡೆಯಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಸಮಾನತೆ ನೀಗಿಸುವ ಕೆಲಸ
ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನೇತೃತ್ವದ 15 ಸಚಿವರು ಕರ್ನಾಟಕ ಅಜೆಂಡಾ ಕಾರ್ಯಪಡೆಯಲ್ಲಿ ಕಾರ್ಯ ನಿರ್ವಹಿಸುವರು. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಕಾರ್ಯಪಡೆ ಕಾರ್ಯ ನಿರ್ವಹಿಸುವುದು. ಮಂಗಳವಾರ (ಫೆ.24) ನಡೆದ ಸಂಪುಟ ಸಭೆ ಕೆಎಟಿಎಫ್ ರಚನೆಯ ನಿರ್ಧಾರ ಕೈಗೊಂಡಿತು ಎಂದು ವಾರ್ತಾ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸಂಪುಟ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಣ ಅಸಮಾನತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನೂತನ ಕಾರ್ಯಪಡೆ ಮುಖ್ಯವಾಗಿ ಕಾರ್ಯ ನಿರ್ವಹಿಸಲಿದೆ. ಇದೇ ವೇಳೆಯಲ್ಲಿ ನಗರ ಪ್ರದೇಶಗಳಲ್ಲಿನ ಉದ್ಯೋಗಾವಕಾಶಗಳ ಸಾಧ್ಯತೆಗಳ ಹೆಚ್ಚಳದ ಕುರಿತೂ ಕಾರ್ಯಪಡೆ ನಿಗಾ ವಹಿಸುವುದು ಎಂದು ಪರಮೇಶ್ವರ್ ತಿಳಿಸಿದರು.
ವಿವಿಧ ಕ್ಷೇತ್ರದ ಪರಿಣತರನ್ನು ಕರ್ನಾಟಕ ಅಜೆಂಡಾ ಕಾರ್ಯಪಡೆಯಲ್ಲಿ ಭಾಗಿಗಳಾಗಲು ಹಾಗೂ ಸಲಹೆ ನೀಡುವಂತೆ ರಾಜ್ಯ ಸರ್ಕಾರ ಆಹ್ವಾನಿಸಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications