ರಾಜ್ಯಪಾಲ ಚತುರ್ವೇದಿಗೆ ಹೆಚ್ಚುವರಿಯಾಗಿ ಕೇರಳ ರಾಜ್ಯ ಭಾರ
ರಾಜ್ಯಪಾಲ ಚತುರ್ವೇದಿಗೆ ಹೆಚ್ಚುವರಿಯಾಗಿ ಕೇರಳ ರಾಜ್ಯ ಭಾರ
ಸಿಕಂದರ್ ಭಕ್ತ್ ನಿಧನದಿಂದ ತೆರವಾದ ಸ್ಥಾನ ಭರ್ತಿ
ಕೇರಳ ರಾಜ್ಯಪಾಲರ ಹಠಾತ್ ನಿಧನದಿಂದ ತೆರವಾಗಿದ್ದ ರಾಜ್ಯಪಾಲರ ಹುದ್ದೆಯನ್ನು ಚತುರ್ವೇದಿ ಅವರಿಗೆ ಕರ್ನಾಟಕದ ಹೊಣೆಯ ಜೊತೆಗೆ ಹೆಚ್ಚುವರಿಯಾಗಿ ಮಂಗಳವಾರದಿಂದ (ಫೆ.24) ವಹಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
ಅಸ್ವಾಸ್ಥ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಿಕಂದರ್ ಭಕ್ತ್ ಅವರು ಫೆ.23ರ ಸೋಮವಾರ ತಿರುವನಂತಪುರದ ಆಸ್ಪತ್ರೆಯಾಂದರಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು . ಕರುಳಿನ ತೊಂದರೆ ನಿವಾರಣೆಗೆ ಫೆ.19ರಂದು ಸಿಕಂದರ್ ಭಕ್ತ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು .
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications