ಮೆರಿಟ್‌ ಇದ್ದವರಿಗೆ ಮಾತ್ರ ಟಿಕೆಟ್‌ - ಮುಖ್ಯಮಂತ್ರಿ ಕೃಷ್ಣ ಸ್ಪಷ್ಟನೆ

ಮೆರಿಟ್‌ ಇದ್ದವರಿಗೆ ಮಾತ್ರ ಟಿಕೆಟ್‌ - ಮುಖ್ಯಮಂತ್ರಿ ಕೃಷ್ಣ ಸ್ಪಷ್ಟನೆ
ಕಾಂಗ್ರೆಸ್‌ ಜಯಭೇರಿ ಬಾರಿಸುವ ಕುರಿತು ಕೃಷ್ಣ ವಿಶ್ವಾಸ

ಮೈಸೂರು : ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಅಭ್ಯರ್ಥಿಯ ಮೆರಿಟ್‌ ಹಾಗೂ ಚುನಾವಣೆಯಲ್ಲಿ ಗೆಲ್ಲುವ ಸಾಮಥ್ಯಣವನ್ನು ಪರಿಗಣಿಸಿ ಟಿಕೆಟ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹೇಳಿದ್ದಾರೆ.

ಕಾಂಗ್ರೆಸ್‌ನ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್‌ ನೀಡುವ ವಿಷಯದಲ್ಲಿಯೂ ಮೆರಿಟ್‌ ಪರಿಗಣಿಸಲಾಗುವುದು. ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಆಗಮಿಸಿರುವವರಿಗೆ ಕೂಡಾ ಮೆರಿಟ್‌ ಆಧಾರದಲ್ಲಿ ಮಾತ್ರ ಟಿಕೆಟ್‌ ದೊರೆಯಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ ತಿಳಿಸಿದರು.

ಕಾಂಗ್ರೆಸ್‌ಗೆ ಇತರ ಪಕ್ಷಗಳಿಂದ, ಪ್ರಮುಖವಾಗಿ ಪ್ರಗತಿಪರ ಜನತಾದಳದಿಂದ ವಲಸೆ ಬರುತ್ತಿರುವ ವ್ಯಕ್ತಿಗಳಿಂದ ಪಕ್ಷದೊಳಗಿನ ಕೆಲವರು ಅಸಮಾಧಾನಗೊಂಡಿದ್ದು ಟಿಕೆಟ್‌ ಕಳಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಕೃಷ್ಣ - ವಲಸೆಯಲ್ಲಿ ಯಾವುದೇ ಗೊಂದಲ ಇಲ್ಲ . ಟಿಕೆಟ್‌ಗೆ ಮೆರಿಟ್‌ ಆಧಾರವಾಗಿರುತ್ತದೆ ಎನ್ನುವುದರಲ್ಲಿಯೂ ಗೊಂದಲವಿಲ್ಲ ಎಂದರು.

ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವ ಕುರಿತು ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. ತಾವು ಯಾವುದೇ ಪಕ್ಷವನ್ನು ಒಡೆಯುತ್ತಿಲ್ಲ ಹಾಗೂ ಪಕ್ಷಗಳಲ್ಲಿ ಬಿರುಕು ಉಂಟು ಮಾಡಲು ಪ್ರಯತ್ನಿಸುತ್ತಿಲ್ಲ ಎಂದೂ ಕೃಷ್ಣ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+