ಮಲ್ಯರ ನೇಗಿಲು ಹೊತ್ತ ರೈತನೊಂದಿಗೆ ಅಳಿದುಳಿದ ಪ್ರಗತಿಪರರು

ಮಲ್ಯರ ನೇಗಿಲು ಹೊತ್ತ ರೈತನೊಂದಿಗೆ ಅಳಿದುಳಿದ ಪ್ರಗತಿಪರರು
ಎಐಪಿಜೆಡಿ ಮತ್ತು ಜನತಾಪಕ್ಷ ಜಂಟಿ ಹೋರಾಟಕ್ಕೆ ನಿರ್ಧಾರ

ಬೆಂಗಳೂರು : ಅಖಿಲ ಭಾರತ ಪ್ರಗತಿಪರ ಜನತಾದಳ ಹಾಗೂ ನೇಗಿಲು ಹೊತ್ತ ರೈತನ ಗುರ್ತಿನ ಜನತಾ ಪಕ್ಷ ಮುಂಬರುವ ರಾಜ್ಯ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಲು ನಿರ್ಧರಿಸಿವೆ.

ಎಐಪಿಜೆಡಿ ಅಧ್ಯಕ್ಷ ಎಸ್‌.ಆರ್‌.ಬೊಮ್ಮಯಿ ಹಾಗೂ ಜನತಾ ಪಕ್ಷದ ಅಧ್ಯಕ್ಷ ಡಾ. ಸುಬ್ರಮಣ್ಯ ಸ್ವಾಮಿ ಅವರ ನೈತೃತ್ವದಲ್ಲಿ ಎರಡೂ ಪಕ್ಷದ ಹಿರಿಯ ನಾಯಕರು ಬೊಮ್ಮಯಿಯವರ ಮನೆಯಲ್ಲಿ ಭಾನುವಾರ ಮಾತುಕತೆ ನಡೆಸಿದರು. ಈ ಮಾತುಕತೆಯಲ್ಲಿ ಎರಡೂ ಪಕ್ಷಗಳು ಮುಂಬರುವ ಚುನಾವಣೆಯಲ್ಲಿ ‘ನೇಗಿಲು ಹೊತ್ತ ರೈತ’ ಚಿಹ್ನೆಯಡಿಯಲ್ಲಿ ಸ್ಪರ್ಧಿಸುವ ನಿರ್ಣಯ ಕೈಗೊಂಡವು.

ಎರ್ಡೂ ಪಕ್ಷಗಳ ಹೊಂದಾಣಿಕೆಯ ಕುರಿತ ಅಂತಿಮ ನಿರ್ಣಯವನ್ನು ಚುನಾವಣಾ ಆಯೋಗ ಮತ್ತು ತಜ್ಞರ ಜೊತೆ ಚರ್ಚಿಸಿ ಮೂರು- ನಾಲ್ಕು ದಿನಗಳಲ್ಲಿ ತೆಗೆದುಕೊಳ್ಳಲು ಉಭಯ ಪಕ್ಷಗಳ ನಾಯಕರು ನಿರ್ಧಸಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಎಪಿಜೆಡಿಯು ಕೆಲ ಪ್ರಮುಖ ನಾಯಕರ ಪಕ್ಷಾಂತರದಿಂದ ಆ ಪಕ್ಷವು ಭಾರೀ ನಷ್ಟ ಅನುಭವಿಸಿದೆ. ರಾಜ್ಯದಲ್ಲಿ ಜನತಾಪಕ್ಷದ ಉಸ್ತುವಾರಿಯನ್ನು ಹೆಂಡದ ದೊರೆ ವಿಜಯ ಮಲ್ಯ ನೋಡಿಕೊಳ್ಳುತ್ತಿ ದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+