ಗೌಡರ ದಳದಲ್ಲಿ ಸಮತಾ ಐಕ್ಯ, ಕೃಷ್ಣ ‘ರಣಹೇಡಿ’ಎಂದ ಪ್ರಸಾದ್‌

ಗೌಡರ ದಳದಲ್ಲಿ ಸಮತಾ ಐಕ್ಯ, ಕೃಷ್ಣ ‘ರಣಹೇಡಿ’ಎಂದ ಪ್ರಸಾದ್‌
ಎನ್‌ಡಿಎಗೆ ಶ್ರೀನಿವಾಸಪ್ರಸಾದ್‌ ವಿದಾಯ, ಕಾಂಗ್ರೆಸ್‌ ಸೋಲಿಸಲು ಸಂಕಲ್ಪ

ಮೈಸೂರು : ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆಯ ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್‌ ನೇತೃತ್ವದ ರಾಜ್ಯ ಸಮತಾಪಕ್ಷ ಮಾಜಿ ಪ್ರಧಾನಿ ದೇವೇಗೌಡರ ಜಾತ್ಯತೀತ ಜನತಾದಳದಲ್ಲಿ ವಿಲೀನ ಹೊಂದಲು ನಿರ್ಧರಿಸಿದೆ.

ಜಾತ್ಯತೀತ ಜನತಾದಳದ ಮುಖಂಡರೊಂದಿಗೆ ಸದ್ಯದಲ್ಲೇ ಚರ್ಚೆ ನಡೆಸಿ ವಿಲೀನದ ದಿನಾಂಕವನ್ನು ನಿರ್ಧರಿಸಲಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸಪ್ರಸಾದ್‌ ಪ್ರಕಟಿಸಿದರು. ಇದಕ್ಕೂ ಮುನ್ನ ಜಾತ್ಯತೀತ ದಳದೊಂದಿಗೆ ವಿಲೀನ ಹೊಂದುವ ಕುರಿತು ಶ್ರೀನಿವಾಸಪ್ರಸಾದ್‌ ತಮ್ಮ ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸೋಲಿಸುವ ಉದ್ದೇಶದಿಂದ ಜಾತ್ಯತೀತ ಜನತಾದಳ ಸೇರುತ್ತಿದ್ದೇನೆ. ಬಿಜೆಪಿಯಲ್ಲಿರುವ ರಾಜಶೇರಮೂರ್ತಿ ಕೂಡ ನಮ್ಮೊಂದಿಗೆ ಬರುತ್ತಾರೆ ಎಂದ ಶ್ರೀನಿವಾಸಪ್ರಸಾದ್‌- ತಾವು ಇನ್ನುಮುಂದೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ ದೂರವಿರುವುದಾಗಿ ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ್‌ ತಮಗೆ ಮಾನ್ಯತೆ ನೀಡಲಿಲ್ಲ . ಅನಂತಕುಮಾರ್‌ ಅವರ ಅನಾಯಕತ್ವದಿಂದ ಬೇಸತ್ತಿರುವುದು ಕೂಡ ಎನ್‌ಡಿಎ ತೊರೆಯಲು ಕಾರಣವಾಗಿದೆ ಎಂದರು.

ಬರ, ಕಾವೇರಿ ವಿವಾದ, ನಾಗಪ್ಪ ಹತ್ಯೆ ಮುಂತಾದ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ವಿಫಲರಾಗಿದ್ದಾರೆ ಎಂದು ದೂರಿದ ಪ್ರಸಾದ್‌- ಮುಖ್ಯಮಂತ್ರಿ ಕೃಷ್ಣರನ್ನು ರಣಹೇಡಿ ಎಂದು ಜರಿದರು. ಮುಂಬರುವ ಚುನಾವಣೆಗಳಲ್ಲಿ ಅನಾರೋಗ್ಯದ ಕಾರಣ ತಾವು ಸ್ಪರ್ಧಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+