ಮಂದಿರದಿಂದ ಸಾಮರಸ್ಯ, ನಿರ್ಮಿಸಲು ಮೂರು ದಾರಿ -ಅಡ್ವಾಣಿ
ಮಂದಿರದಿಂದ ಸಾಮರಸ್ಯ, ನಿರ್ಮಿಸಲು ಮೂರು ದಾರಿ -ಅಡ್ವಾಣಿ
ವಾರಣಾಸಿ ಚುನಾವಣಾ ಸಭೆಯಲ್ಲಿ ರಾಮಮಂತ್ರ ಜಪಿಸಿದ ಉಪ ಪ್ರಧಾನಿ
ನಮ್ಮ ಸರಕಾರ ಮುಸ್ಲಿಂ ನಾಯಕರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ. ಆದರೆ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿಯಂಥ ಒಕ್ಕೂಟಗಳೊಂದಿಗೆ ಸರ್ಕಾರ ಯಾವುದೇ ಹಂತದಲ್ಲೂ ಸಂಪರ್ಕ ಸಾಧಿಸಿಲ್ಲ ಎಂದು ಉಪ ಪ್ರಧಾನಿ ಅಡ್ವಾಣಿ ಹೇಳಿದರು. ಅವರು ಚುನಾವಣಾ ಸಭೆಯಾಂದರಲ್ಲಿ ಮಾತನಾಡುತ್ತಿದ್ದರು.
ಅಯೋಧ್ಯೆ ವಿವಾದ ಬಗೆಹರಿಸಲು ಮೂರು ದಾರಿಯಿದೆ. ಮೊದಲನೆಯದು ಅಯೋಧ್ಯೆ ವಿವಾದ ಕುರಿತಂತೆ ಕಾನೂನು ಜಾರಿಗೆ ತರುವುದು. ಎರಡನೆಯದು ನ್ಯಾಯಾಲಯದ ತೀರ್ಪಿಗೆ ಕಾಯುವುದು. ಈ ಎರಡು ರೀತಿಯ ಪರಿಹಾರಕ್ಕೆ ಸರ್ವ ಸಮ್ಮತಿ ರೂಪುಗೊಳ್ಳುವಂತೆ ಕಾಣುತ್ತಿಲ್ಲ . ಆ ಕಾರಣದಿಂದಾಗಿ ಒಪ್ಪಂದದ ಮಾತುಕತೆಯ ಮೂರನೇ ಮಾರ್ಗವೇ ಅಯೋಧ್ಯೆ ವಿವಾದ ಪರಿಹಾರಕ್ಕೆ ಸೂಕ್ತವೆನ್ನಿಸುತ್ತಿದೆ ಎಂದು ಅಡ್ವಾಣಿ ಹೇಳಿದರು.
ರಾಮಮಂದಿರ ಕಟ್ಟುವ ಉದ್ದೇಶ ಬಿಜೆಪಿಗೆ ಎಂದ ಅಡ್ವಾಣಿ- ಮಂದಿರ ನಿರ್ಮಾಣದಿಂದ ಕೋಮು ಸಾಮರಸ್ಯ ನೆಲಸಬಹುದೆಂದು ಆಶಾಭಾವನೆ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications