ಮಧ್ವರ ಉಡುಪಿಯಲ್ಲಿ ಫೆ.22 ಕೋಮು ಸೌಹಾರ್ದತಾ ಸಮ್ಮೇಳನ
ಮಧ್ವರ ಉಡುಪಿಯಲ್ಲಿ ಫೆ.22 ಕೋಮು ಸೌಹಾರ್ದತಾ ಸಮ್ಮೇಳನ
ಸಮ್ಮೇಳನಕ್ಕೆ ಗಿರೀಶ್ ಕಾರ್ನಾಡ್, ಚನ್ನಮಲ್ಲ ಸ್ವಾಮೀಜಿ
ದೇಶದಲ್ಲಿ ಕೋಮು ಸೌಹಾರ್ದತೆಯನ್ನು ವೃದ್ಧಿಸುವ ಹಿನ್ನೆಲೆಯಲ್ಲಿ ಈ ಸಮಾವೇಶ ಏರ್ಪಾಡಾಗಿದೆ. ಸಮಾಜ ಸೇವಕ ಸ್ವಾಮಿ ಅಗ್ನಿವೇಶ್ ಸಮ್ಮೇಳನವನ್ನು ಉದ್ಘಾಟಿಸುವರು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೊಹಮದ್ ಯಾಸೀನ್ ತಿಳಿಸಿದ್ದಾರೆ.
ಮಂಗಳೂರಿನ ಮಾಧ್ಯಮ ಕಮ್ಯೂನಿಕೇಷನ್ಸ್‌ನ ಎಸ್.ಎಂ.ಸಯ್ಯದ್ ಖಲೀಲ್ ಅವರು ಸಮಾವೇಶದ ಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಗಿರೀಶ್ ಕಾರ್ನಾಡ್, ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹಾಗೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಸಿರಾಜುಲ್ ಹಸನ್ ಸಮಾವೇಶದಲ್ಲಿ ಮಾತನಾಡಲಿದ್ದಾರೆ.
ಜಿಲ್ಲಾಧಿಕಾರಿ ಎಸ್.ಆರ್.ಉಮಾಶಂಕರ್, ವಾರ್ತಾ ಭಾರತಿ ಸಂಪಾದಕ ಎ.ಎಸ್.ಪುತ್ತಿಗೆ, ಸಚಿವ ವಸಂತ ಸಾಲಿಯಾನ, ಶಾಸಕರಾದ ಯು.ಆರ್.ಸಭಾಪತಿ, ಜಯಪ್ರಕಾಶ್ ಹೆಗಡೆ, ಮಾಜಿ ಸಂಸದ ವಿನಯಕುಮಾರ ಸೊರಕೆ ಮುಂತಾದವರು ಸಮ್ಮೇಳನದಜಲ್ಲಿ ಭಾಗವಹಿಸುವರು ಎಂದು ಯಾಸೀನ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications