ಕೃಷ್ಣರ ಸರ್ಕಾರದ ಕಲಂಕಗಳ ಬಹಿರಂಗಗೊಳಿಸುವೆ - ದೇವೇಗೌಡ
ಕೃಷ್ಣರ ಸರ್ಕಾರದ ಕಲಂಕಗಳ ಬಹಿರಂಗಗೊಳಿಸುವೆ - ದೇವೇಗೌಡ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕುರಿತು ಮಾಜಿ ಪ್ರಧಾನಿ ಕಟು ಟೀಕೆ
ತಮ್ಮ 42 ವರ್ಷಗಳ ರಾಜಕೀಯ ಜೀವನದಲ್ಲಿ ನೋಡಿದ ‘ಅತಿ ಕೆಟ್ಟ’ ಆಡಳಿತ ಹಾಲಿ ಸರ್ಕಾರದ್ದು ಎಂದು ದೇವೇಗೌಡ ಟೀಕಿಸಿದರು. ರಾಜ್ಯ ಪ್ರವಾಸದಲ್ಲಿರುವ ದೇವೇಗೌಡ, ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ , ವಿದ್ಯುತ್ ಕಣ್ಣಾಮುಚ್ಚಾಲೆ, ಸಂಚಾರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಸಮರ್ಪಕ ವ್ಯವಸ್ಥೆ ಎಲ್ಲೆಡೆ ತಾಂಡವವಾಡುತ್ತಿದೆ ಎಂದು ದೇವೇಗೌಡ ಹೇಳಿದರು.
ರಾಜ್ಯದ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಕೂಡ ತನ್ನ ಕಾರ್ಯ ನಿರ್ವಹಿಸುವಲ್ಲಿ ಸೋತಿದೆ. ಇನ್ನು ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರ, ತನ್ನ ಚುನಾವಣಾ ಪ್ರಚಾರಕ್ಕೆ ಸರ್ಕಾರದ ಬೊಕ್ಕಸದ ಹಣವನ್ನೇ ಬಳಸುತ್ತಿದೆ. ಇದು ಅಪರಾಧ ಎಂದು ದೇವೇಗೌಡ ಕೇಂದ್ರದ ಕ್ರಮವನ್ನು ಖಂಡಿಸಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications