ವಲಸೆ ಎರಡನೇ ಕಂತು.... ಹಾವೇರಿ ಸಮಾವೇಶದಿ ಬಿಜೆಪಿ ನಿರೀಕ್ಷೆ

ವಲಸೆ ಎರಡನೇ ಕಂತು.... ಹಾವೇರಿ ಸಮಾವೇಶದಿ ಬಿಜೆಪಿ ನಿರೀಕ್ಷೆ
ಹಾವೇರಿಯಲ್ಲಿ ಫೆ.24ರಂದು ರಾಜಕೀಯ ಧ್ರುವೀಕರಣ ಸಮಾವೇಶ

ಹುಬ್ಬಳ್ಳಿ : ಸೂತಕದ ಮನೆಯಂತಾಗಿರುವ ಪ್ರಗತಿಪರ ಜನತಾದಳದಲ್ಲಿ ಸಿಕ್ಕಷ್ಟನ್ನು ಬಾಚಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್‌ ಹಾಗೂ ಭಾರತೀಯ ಜನತಾಪಕ್ಷದ ರಾಜಕಾರಣ ಮುಂದುವರೆದಿದ್ದು , ರಾಜ್ಯದಲ್ಲಿನ ರಾಜಕೀಯ ಧ್ರುವೀಕರಣಕ್ಕೆ ಚಾಲನೆ ನೀಡುವ ಉದ್ದೇಶದಿಂದ ಸಮಾವೇಶವೊಂದನ್ನು ಬಿಜೆಪಿ ಏರ್ಪಡಿಸಿದೆ.

ರಾಜಕೀಯ ಧ್ರುವೀಕರಣ ಸಂಬಂಧ ಫೆಬ್ರವರಿ 24ರಂದು ಹಾವೇರಿಯಲ್ಲಿ ಸಮಾವೇಶವೊಂದನ್ನು ಏರ್ಪಡಿಸಲಾಗಿದೆ ಎಂದು ವಿಧಾನಸಭೆಯಲ್ಲಿ ನ ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಗುರುವಾರ (ಫೆ.19) ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ವಾಜಪೇಯಿ ಅವರ ನಾಯಕತ್ವದಲ್ಲಿ ನಂಬಿಕೆಯಿಟ್ಟ ಪ್ರಗತಿಪರ ಜನತಾದಳದ ಅನೇಕ ನಾಯಕರು ಹಾಗೂ ಕೆಲವು ಕಾಂಗ್ರೆಸ್ಸಿಗರು ಬಿಜೆಪಿ ಸೇರಲಿದ್ದಾರೆ. ಪ್ರಗತಿಪರ ದಳದ ಎಸ್‌.ಎಸ್‌.ಪಾಟೀಲ್‌ ಕೂಡ ಬಿಜೆಪಿ ಸೇರುವ ನಿರೀಕ್ಷೆಯಿದೆ. ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ್‌ ಹಾಗೂ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಈ ಸಮಾವೇಶದಲ್ಲಿ ಭಾಗವಹಿಸುವರು ಎಂದು ಶೆಟ್ಟರ್‌ ಹೇಳಿದರು.

ಬಿಜೆಪಿಯ ಮುಂದಿನ ರಣತಂತ್ರದ ನೀಲನಕ್ಷೆಯ ಕುರಿತಾಗಿಯೂ ಹಾವೇರಿ ಸಮಾವೇಶ ಚರ್ಚಿಸಲಿದೆ ಎಂದು ಶೆಟ್ಟರ್‌ ತಿಳಿಸಿದರು.

ಪ್ರಗತಿಪರ ಜನತಾದಳದ ಅನೇಕ ನಾಯಕರು ಕಾಂಗ್ರೆಸ್ಸಿಗೆ ವಲಸೆ ಬಂದಿರುವುದರಿಂದ, ಕಾಂಗ್ರೆಸ್‌ ಪಕ್ಷದಲ್ಲಿ ಬಂಡಾಯದ ಬಿಸಿ ಕಾಣಿಸಿಕೊಂಡಿದೆ. ಟಿಕೆಟ್‌ ವಂಚಿತರು ಹಾಗೂ ಬಂಡಾಯ ಕಾಂಗ್ರೆಸ್ಸಿಗರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಕಸರತ್ತು ನಡೆಸುತ್ತಿದೆ.

(ಏಜನ್ಸೀಸ್‌)

ಪೂರಕ ಓದಿಗೆ-
ಅಧಿಕಾರ ರಾಜಕಾರಣ: ಪ್ರಗತಿಗಾಗಿ ಪ್ರಗತಿಪರರ ಕಾಂಗ್ರೆಸ್‌ವಲಸೆ

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+