‘ಸರೋಜಿನಿ ನಾಯ್ಡು ಪ್ರಶಸ್ತಿ’ಗೆ ಪ್ರಕಟಿತ ವರದಿ/ಲೇಖನ ಆಹ್ವಾನ
‘ಸರೋಜಿನಿ ನಾಯ್ಡು ಪ್ರಶಸ್ತಿ’ಗೆ ಪ್ರಕಟಿತ ವರದಿ/ಲೇಖನ ಆಹ್ವಾನ
ಆಯ್ದ ಮೂವರಿಗೆ ಪ್ರಶಸ್ತಿ ಹಾಗೂ ಎರಡು ಲಕ್ಷರೂಪಾಯಿ
ಬೆಂಗಳೂರು: ನಾಲ್ಕನೇ ‘ಸರೋಜಿನಿ ನಾಯ್ಡು ಪ್ರಶಸ್ತಿ’ಗಾಗಿ ಪತ್ರಿಕೆಗಳಲ್ಲಿ ‘ಮಹಿಳೆ ಅಥವಾ ಪಂಚಾಯತ್‌ರಾಜ್’ ವಿಷಯದ ಕುರಿತು ಪ್ರಕಟವಾದ ಉತ್ತಮ ವರದಿ/ ಲೇಖನಗಳನ್ನು ಆಹ್ವಾನಿಸಲಾಗಿದೆ. ಭಾರತದ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಲ್ಲಿ ‘ಹಂಗರ್ ಯೋಜನೆ’ಯು ಈ ಪ್ರಶಸ್ತಿಯನ್ನು ನೀಡುತ್ತಿದೆ.
ಇಂಗ್ಲೀಷ್, ಹಿಂದಿ, ಹಾಗೂ ಇತರ ಭಾರತೀಯ ಭಾಷೆಯಲ್ಲಿ ತಲಾ ಒಬ್ಬರಂತೆ ಮೂವರಿಗೆ ಈ ಗೌರವ ನೀಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತರಿಗೆ ಅಕ್ಟೋಬರ 2 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸ್ಮರಣ ಫಲಕ ಹಾಗೂ ಎರಡು ಲಕ್ಷ ರುಪಾಯಿ ನಗದನ್ನು ಪ್ರಶಸ್ತಿ ಒಳಗೊಂಡಿದೆ. ಪ್ರಕಟಿತ ವರದಿಯನ್ನು ಕಳುಹಿಸಿ ಕೊಡಬೇಕಾದ ಕೊನೆಯ ದಿನಾಂಕ 15 ಜುಲೈ 2004.
ವಿಳಾಸ:- ಸ್ಥಳೀಯ ನಿದೇರ್ಶಕರು, ಹಂಗರ್ ಯೋಜನೆ, ಎರಡನೇ ಮಹಡಿ, ಬಿ-3/18, ವಸಂತ ವಿಹಾರ, ದೆಹಲಿ-110057. ಇ-ಮೇಲ್ : [email protected].
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications