‘ಛಾಪ ಪಾಪದಿಂದ ಬೊಕ್ಕಸಕ್ಕಾದ ನಷ್ಟ ವೆಷ್ಟು ? ಬಹಿರಂಗ ಪಡಿಸಿ’
‘ಛಾಪ ಪಾಪದಿಂದ ಬೊಕ್ಕಸಕ್ಕಾದ ನಷ್ಟ ವೆಷ್ಟು ? ಬಹಿರಂಗ ಪಡಿಸಿ’
ಕಾಂಗ್ರೆಸ್, ದಳ, ಮುಸ್ಲಿಂಲೀಗ್, ಸಿಪಿಎಂ ನಡುವೆ ರಹಸ್ಯ ಒಪ್ಪಂದ -ಅನಂತಕುಮಾರ್ ಆರೋಪ
ಛಾಪಾ ಪಾಪ ಪ್ರಕರಣ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ . ತನಿಖೆಯನ್ನು ಸ್ಟಾಂಪಿಟ್ ಅಧಿಕಾರಿಗಳ ತಂಡ ಸಮರ್ಪಕವಾಗಿ ನಡೆಸುತ್ತಿಲ್ಲ . ಸಿಬಿಐ ಜೊತೆ ಸಹಕರಿಸಲು ರಾಜ್ಯ ಸರ್ಕಾರಕ್ಕೆ ಇಷ್ಟವಿಲ್ಲ . ಇದರಿಂದಾಗಿ ತನಿಖೆ ದಿಕ್ಕುತಪ್ಪಿದೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ್ ಹೇಳಿದರು.
ತನಿಖೆಯಲ್ಲಿನ ಗೊಂದಲದಿಂದಾಗಿ ಛಾಪ ಪಾಪ ತನಿಖೆಯ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ ಎಂದು ಅನಂತಕುಮಾರ್ ಆಪಾದಿಸಿದರು.
ಇತ್ತೀಚೆಗೆ- ಕಾಂಗ್ರೆಸ್, ಜನತಾದಳ, ಭಾರತೀಯ ಮುಸ್ಲಿಂ ಲೀಗ್ ಹಾಗೂ ಸಿಪಿಎಂ ಪಕ್ಷಗಳು ಸಭೆಗೂಡಿ ಚುನಾವಣೆಯಲ್ಲಿ ಒಗ್ಗೂಡಿ ಹೋರಾಡಲು ರಹಸ್ಯ ಒಪ್ಪಂದ ಮಾಡಿಕೊಂಡಿವೆ. ಈ ಪಕ್ಷಗಳ ಕುರಿತು ಮತದಾರರು ಎಚ್ಚರದಿಂದಿರಬೇಕು. ಎಲ್ಲ ಪಕ್ಷಗಳು ಜಾತ್ಯತೀತತೆಯ ಕುರಿತು ನಾಟಕವಾಡುತ್ತಿವೆ. ಆದರೆ ದೇಶದ ಏಕೈಕ ಜಾತ್ಯತೀತ ಪಕ್ಷ ಭಾರತೀಯ ಜನತಾ ಪಕ್ಷ ಎಂದು ಅನಂತಕುಮಾರ್ ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆ ಹೊಂದಿದ ಮಾಜಿ ಶಾಸಕ ಎನ್.ನಾಗರಾಜ್ ಸೇರಿದಂತೆ 25 ಮಂದಿ ಪ್ರಗತಿಪರ ಜನತಾದಳದ ನಾಯಕರನ್ನು ಅನಂತಕುಮಾರ್ ಸ್ವಾಗತಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications