ಜೇವರ್ಗಿ ಅಥವಾ ಬೀದರ್‌ನಿಂದ ಅಸೆಂಬ್ಲಿಗೆ ಮಟ್ಟೆಣ್ಣವರ್ ಸ್ಪರ್ಧೆ
ಜೇವರ್ಗಿ ಅಥವಾ ಬೀದರ್‌ನಿಂದ ಅಸೆಂಬ್ಲಿಗೆ ಮಟ್ಟೆಣ್ಣವರ್ ಸ್ಪರ್ಧೆ
ಸತ್ಯೇಂದ್ರ ದುಬೆ ಪಾಡು ನನಗೆ ಬೇಡ, ಹುತಾತ್ಮನಾಗುವುದು ನನಗಿಷ್ಟವಿಲ್ಲ ...
ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಮಟ್ಟೆಣ್ಣವರ್- ಮುಂಬರುವ ಚುನಾವಣೆಗಳಲ್ಲಿ ತಾವು ಸ್ಪರ್ಧಿಸುವುದು ಖಚಿತವಾಗಿದ್ದು , ಜೇವರ್ಗಿ ಅಥವಾ ಬೀದರ್ ಕ್ಷೇತ್ರಗಳಲ್ಲಿ ಯಾವುದನ್ನು ಆಯ್ದುಕೊಳ್ಳಬೇಕೆನ್ನುವುದು ಇನ್ನೂ ಖಚಿತವಾಗಿಲ್ಲ . ಆದರೆ, ಇವೆರಡರಲ್ಲಿ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಖಚಿತ ಎಂದು ಇತ್ತೀಚೆಗೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದರು.
ತಾವು ರಾಜಕೀಯ ಪ್ರವೇಶಿಸಿದುದನ್ನು ಸಮರ್ಥಿಸಿಕೊಂಡ ಮಟ್ಟೆಣ್ಣವರ್, ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ತಮ್ಮ ರಾಜಕೀಯ ನಡೆ ಅನುಕೂಲಕರವಾಗಿದೆ ಎಂದರು. ಭ್ರಷ್ಟಾಚಾರ ಒಂದು ಸಾಮಾಜಿಕ ಸಮಸ್ಯೆ. ಆಳವಾಗಿ ಬೇರು ಬಿಟ್ಟಿರುವ ಭ್ರಷ್ಟಾಚಾರದ ವಿರುದ್ಧ ಏಕಾಂಗಿ ಹೋರಾಟ ಸಾಧ್ಯವಿಲ್ಲ . ಆ ಕಾರಣದಿಂದಲೇ ರಾಜಕೀಯ ಪ್ರವೇಶಿಸಿದೆ ಎಂದು ಮಟ್ಟೆಣ್ಣವರ್ ಹೇಳಿದರು.
ಏಕಾಂಗಿಯಾಗಿ ಹೋರಾಡಿದ ಸತ್ಯೇಂದ್ರ ದುಬೆ (ಬಿಹಾರ) ಹತ್ಯೆಗೀಡಾದರು. ನಾನು ಹುತಾತ್ಮ ಅಥವಾ ಹೀರೋ ಆಗಲು ಬಯಸುವುದಿಲ್ಲ . ಬಿಜೆಪಿ ಮೂಲಕ ತಮ್ಮ ಹೋರಾಟ ಮುಂದುವರಿಸುತ್ತೇನೆ ಎಂದು ಮಟ್ಟೆಣ್ಣವರ್ ಹೇಳಿದರು. ಶಿಸ್ತಿಗೆ ಆದ್ಯತೆ ನೀಡುವ ಏಕಮಾತ್ರ ಪಕ್ಷ ಎಂದು ಬಿಜೆಪಿಯನ್ನು ಅವರು ಬಣ್ಣಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications