ಅಧಿಕಾರ ರಾಜಕಾರಣ: ಪ್ರಗತಿಗಾಗಿ ಪ್ರಗತಿಪರರ ಕಾಂಗ್ರೆಸ್‌ವಲಸೆ
ಅಧಿಕಾರ ರಾಜಕಾರಣ: ಪ್ರಗತಿಗಾಗಿ ಪ್ರಗತಿಪರರ ಕಾಂಗ್ರೆಸ್‌ವಲಸೆ
ಏಕಾಂಗಿಯಾದ ತಟಸ್ಥ ನಾಣಯ್ಯ, ಖಾಲಿಮನೆಯಲ್ಲಿ ಬೊಮ್ಮಾಯಿ-ಸೋಮಶೇಖರ್
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಹಾಗೂ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ವಲಸೆ ಹಕ್ಕಿಗಳನ್ನು ಸಂಭ್ರಮದಿಂದ ಸ್ವಾಗತಿಸಿದರು. ನವದೆಹಲಿಯ ಎಐಸಿಸಿ ಕಾರ್ಯಾಲಯದಲ್ಲಿ ಈ ಪಕ್ಷಾಂತರದ ಕಾರ್ಯಕ್ರಮ ಫೆ.18ರ ಬುಧವಾರ ನಡೆಯಿತು.
ಪ್ರಗತಿಪರ ಜನತಾದಳದ ಮುಖಂಡರು ಕಾಂಗ್ರೆಸ್‌ಗೆ ಸೇರಿದ ಕುರಿತು ಹರ್ಷ ವ್ಯಕ್ತಪಡಿಸಿದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ಈ ನಾಯಕರು ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್‌ಗೆ ಸೇರ್ಪಡೆ ಹೊಂದಿದ್ದಾರೆ ಎಂದರು.
ಕಾಂಗ್ರೆಸ್ ಸೇರಿದವರ ಪಟ್ಟಿ ಇಂತಿದೆ :
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಂಡ್ಯದ ಜಿ.ಮಾದೇಗೌಡರ ಪುತ್ರ ಮಧು ಮಾದೇಗೌಡ, ಶಾಸಕರಾದ ಚೌಡರೆಡ್ಡಿ , ಕೃಷ್ಣ ಭೈರೇಗೌಡ, ಕೆ.ಶ್ರೀನಿವಾಸ ಗೌಡ, ಶಿವಶಂಕರ ರೆಡ್ಡಿ , ಎ.ಬಿ.ಪಾಟೀಲ್, ಉಮೇಶ್ ಕತ್ತಿ , ಶಿವಾನಂದ ಮಹಾಂತೇಶ್ ಕೌಜಲಗಿ, ಎಸ್.ಸಿ.ಮಾಳಗಿ, ಹಂಪನಗೌಡ ಬಾದರ್ಲಿ, ಕೆ.ಬಿ.ಮಲ್ಲಿಕಾರ್ಜುನ ಮತ್ತು ಚಂದ್ರಪ್ಪ .
ಇದೇ ಸಂದರ್ಭದಲ್ಲಿ ನಿವೃತ್ತ ಡಿಜಿಪಿ ಎಲ್.ರೇವಣಸಿದ್ಧಯ್ಯ, ಪ್ರಗತಿಪರ ಜನತಾದಳದ ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರೆಡ್ಡಿ ಕಾಂಗ್ರೆಸ್‌ಗೆ ಸೇರ್ಪಡೆ ಹೊಂದಿದರು.
ಕಾಂಗ್ರೆಸ್ ಸೇರುವ ನಿರೀಕ್ಷೆಯಿದ್ದ ಪ್ರಗತಿಪರದ ರಮೇಶ್‌ಕುಮಾರ್ ತಮ್ಮ ಅಭಿಮಾನಿಗಳ ವಿರೋಧ ಹಾಗೂ ಶ್ರೀನಿವಾಸಪುರದ ಕಾಂಗ್ರೆಸ್ ಶಾಸಕರ ವಿರೋಧದಿಂದಾಗಿ ಕಾಂಗ್ರೆಸ್‌ಗೆ ಸೇರುವುದು ಸಾಧಯವಾಗಿಲ್ಲ . ತಟಸ್ಥ ಜನತಾದಳದ ಎಂ.ಸಿ.ನಾಣಯ್ಯ ಕೂಡ ಈಗ ಏಕಾಂಗಿ.
ಸೋಮಶೇಖರ್ ವಿಷಾದ : ಪ್ರಗತಿಪರ ಜನತಾದಳದ ನಾಯಕರು ಕಾಂಗ್ರೆಸ್ ಸೇರಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ಪ್ರಗತಿಪರ ಜನತಾದಳದ ಮುಖಂಡ ಬಿ.ಸೋಮಶೇಖರ್- ತಾವು ಈ ಘಟನೆಯಿಂದ ವಿಚಲಿತರಾಗದೆ ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ತಿಳಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಮಲ್ಯ ನೇತೃತ್ವದ ಜನತಪಕ್ಷದೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಸೋಮಶೇಖರ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications