ನವಜೋತ್‌ಸಿಂಗ್‌ ಸಿಧು : ಕಾಟ್‌ ಅಂಡ್‌ ಬೋಲ್ಡ್‌ ಬೈ ಬಿಜೆಪಿ

ನವಜೋತ್‌ಸಿಂಗ್‌ ಸಿಧು : ಕಾಟ್‌ ಅಂಡ್‌ ಬೋಲ್ಡ್‌ ಬೈ ಬಿಜೆಪಿ
‘ಮಾಜಿ ಕ್ರಿಕೆಟಿಗ ಚೇತನ್‌ ಚೌಹಾಣ್‌ ಪಕ್ಷ ಸೇರುವಂತೆ ಆಹ್ವಾನಿಸಿದರು. ಹಿಂದೆ ಮುಂದೆ ನೋಡದೇ ಒಪ್ಪಿಕೊಂಡೆ. ಅಟಲ್‌ ನೇತೃತ್ವದ ಬಿಜೆಪಿಯಲ್ಲಿ ನನಗೆ ಅಚಲ ನಂಬಿಕೆ ಇದೆ’

ನವದೆಹಲಿ: ಮಾಜಿ ಕ್ರಿಕೆಟಿಗ, ಹಾಲಿ ವೀಕ್ಷಕ ವಿವರಣೆಗಾರ ನವಜೋತ್‌ ಸಿಂಗ್‌ ಸಿಧು, ಬಾಲಿವುಡ್‌ ತಾರೆಗಳಾದ ಜಿತೇಂದ್ರ, ಸುರೇಶ್‌ ಒಬೆರಾಯ್‌, ಟಿವಿ ಮಹಾಭಾರತದ ಗಜೇಂದ್ರ ಚೌಹಾಣ್‌, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಗೋವಿಂದ್‌ ನಾರಾಯಣ್‌ ಸಿಂಗ್‌ ಬಿಜೆಪಿ ಮಡಿಲು ಸೇರಿದ್ದಾರೆ.

ಬಾಲಿವುಡ್‌ನ ಮಾಜಿ ತಾರೆ ಜಂಪಿಂಗ್‌ ಜ್ಯಾಕ್‌ ಜಿತೇಂದ್ರ ಫೆಬ್ರವರಿ 17ರ ರಾತ್ರಿ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿ, ಬಳಿಕ ಪಕ್ಷಾಧ್ಯಕ್ಷ ವೆಂಕಯ್ಯ ನಾಯ್ಡು ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಅಟಲ್‌ ನೇತ್ರತ್ವದ ಬಿಜೆಪಿ ಪರ ಸಂಭ್ರಮದಿಂದ ಪ್ರಚಾರ ಮಾಡುತ್ತೇನೆ. ನಾನು ಚುನಾವಣೆಗೆ ಸ್ಪರ್ಧಿಸುವುದೂ ಇಲ್ಲ. ನನಗೆ ಯಾವ ಸ್ಥಾನಮಾನದ ಆಸೆಯೂ ಇಲ್ಲ. ಅಟಲ್‌ ನೇತೃತ್ವದಲ್ಲಿ ದೇಶದ ಅಭಿವೃದ್ಧಿಗೆ ಕಿರುಕಾಣಿಕೆ ಸಲ್ಲಿಸುವುದಷ್ಟೇ ನನ್ನಾಸೆ ಎಂದು ಜಿತೇಂದ್ರ ಸುದ್ದಿಗಾರರಿಗೆ ತಿಳಿಸಿದರು.

ವೀಕ್ಷಕ ವಿವರಣೆಕಾರನಾಗಿ ಜೀವನದ 2ನೇ ಇನಿಂಗ್ಸ್‌ನಲ್ಲೂ ಯಶಸ್ಸು ಸಾಧಿಸಿರುವ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು, ಬಿಜೆಪಿ ಸೇರುವ ಮೂಲಕ ಫೆಬ್ರವರಿ 17ರಂದು ತಮ್ಮ 3ನೇ ಇನಿಂಗ್ಸ್‌ ಪ್ರಾರಂಭಿಸಿದರು. ‘ಮಾಜಿ ಕ್ರಿಕೆಟಿಗ ಚೇತನ್‌ ಚೌಹಾಣ್‌ ಪಕ್ಷ ಸೇರುವಂತೆ ಆಹ್ವಾನಿಸಿದರು. ಹಿಂದೆ ಮುಂದೆ ನೋಡದೇ ಒಪ್ಪಿಕೊಂಡೆ. ಅಟಲ್‌ ನೇತೃತ್ವದ ಬಿಜೆಪಿಯಲ್ಲಿ ನನಗೆ ಅಚಲ ನಂಬಿಕೆ ಇದೆ’ ಎಂದು ಸಿಧು ಹೇಳಿದರು.

ಇದೇ ಸಂದರ್ಬದಲ್ಲಿ ಬೆಂಗಳೂರಿನಲ್ಲಿ ಮಾಜಿ ಶಾಸಕರಾದ ಹಾಸನದ ಕರೀಗೌಡ ಮತ್ತು ಚಿತ್ರದುರ್ಗದ ಮಹಮದ್‌ ಸೈಫುದ್ದೀನ್‌ ಕ್ರಮವಾಗಿ ದಳ(ಎಸ್‌) ಮತ್ತು ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ರಾಜ್ಯಾಧ್ಯಕ್ಷ ಅನಂತ್‌ ಕುಮಾರ್‌ ಸಮ್ಮುಖದಲ್ಲಿ ಫೆ. 17ರಂದು ಬಿಜೆಪಿ ಸೇರಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+