ಮಾನಿ ್ವ : ಸಾರ್ವಜನಿಕ ವೇದಿಕೆಯಲ್ಲಿ ಬೆಂಕಿ, ಅಗ್ನಿಶಾಮಕ ದಳ ನಾಪತ್ತೆ
ಮಾನಿ ್ವ : ಸಾರ್ವಜನಿಕ ವೇದಿಕೆಯಲ್ಲಿ ಬೆಂಕಿ, ಅಗ್ನಿಶಾಮಕ ದಳ ನಾಪತ್ತೆ
ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ಕಾಯಕ್ರಮದಲ್ಲಿ ಅನಾಹುತ
ರಾಯಚೂರು ಜಿಲ್ಲೆಯ ಮಾನ್ವಿಯ ಬಸ್ ನಿಲ್ದಾಣದಲ್ಲಿ, ನಿಲ್ದಾಣದ ಪುನರ್‌ನವೀಕರಣ ಸೇರಿದಂತೆ ಅನೇಕ ಯೋಜನೆಗಳನ್ನು ಉದ್ಘಾಟಿಸಲು ಸಚಿವರಾದ ಧರ್ಮಸಿಂಗ್, ರಾಜಾ ಅಮರೇಶ್ವರ ನಾಯಕ್, ಶಾಸಕ ಎನ್.ಎಸ್. ಬೋಸರಾಜು ಆಗಮಿಸಿದ್ದರು. ಅವರು ಉಪಸ್ಥಿತರಿದ್ದ ವೇದಿಕೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಕೆಲ ಕ್ಷಣದಲ್ಲೇ ಬೆಂಕಿ ಇಡೀ ವೇದಿಕೆಗೆ ವ್ಯಾಪಿಸಿತು. ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳದವರ ಸಂಪರ್ಕವೂ ಸಿಗಲಿಲ್ಲ. ಸಚಿವರಾದ ಧರ್ಮಸಿಂಗ್‌ರನ್ನು ವೇದಿಕೆಯಿಂದ ಪಾರು ಮಾಡಲು ಸ್ವಲ್ಪ ತೊಡಕುಂಟಾಯ್ತು. ಪೋಲಿಸರು ಜೀವ ರಕ್ಷಣೆಗೆ ಮುಂದಾಗಿದ್ದರು.
ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ವೇದಿಕೆ ಸುಟ್ಟು ಕರಕಲಾಗಿತ್ತು. ನಗರದಲ್ಲಿಯೇ ಅಗ್ನಿಶಾಮಕ ದಳವಿದ್ದು, ಮೂವರು ಸಂಪುಟ ದರ್ಜೆಯ ಸಚಿವರು, ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂಬ ಮಾಹಿತಿಯಿದ್ದರೂ ಜಾಗೃತರಾಗಿರಲಿಲ್ಲ. ಅಗ್ನಿಶಾಮಕ ದಳದ ಕರ್ತವ್ಯಲೋಪದಿಂದ ಅಪಾಯದ ಪ್ರಮಾಣ ಹೆಚ್ಚಾಗಿದೆ ಎಂದು ಸೇರಿದ್ದ ಜನತೆ ಆರೋಪಿಸಿದರು. ಈ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ತನಿಖೆ ನಡೆಸಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications