ಕೇರಳದಲ್ಲಿ ಕೋಕಾಕೋಲಾ ಕಂಪನಿಗೆ ಅಂತರ್ಜಲ ನೀರು-ನಿರಾಕರಣೆ
ಕೇರಳದಲ್ಲಿ ಕೋಕಾಕೋಲಾ ಕಂಪನಿಗೆ ಅಂತರ್ಜಲ ನೀರು-ನಿರಾಕರಣೆ
ಬರ ಪರಿಸ್ಥಿಯ ಹಿನ್ನೆಲೆಯಲ್ಲಿ ಸಚಿವ ಸಂಪುಟದ ನಿರ್ಧಾರ
‘ನೀರಿಗಾಗಿ ಬದಲಿ ವ್ಯವಸ್ಥೆಯ ಕುರಿತು ಚಿಂತನೆ ನಡೆಸುವುದು ಅವರಿಗೆ ಬಿಟ್ಟ ವಿಷಯ. ಈ ನಿರ್ಣಯವು ಪ್ಲಾಚಿಮಾಡದ ಕೋಕ್ ಕಂಪೆನಿಗೆ ಮಾತ್ರ ಅನ್ವಯವಾಗುತ್ತದೆ. ಜಿಲ್ಲಾ ಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಈ ಕುರಿತು ಸಮಸ್ಯೆ ಎದುರಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದೇ ಜಿಲ್ಲೆಯ ಪುದುಸ್ಸೇರಿಯಲ್ಲಿರುವ ಪೆಪ್ಸಿ ಕಂಪೆನಿ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ ’ ಎಂದು ಹೇಳಿದರು.
ಈ ಕೈಗಾರಿಕೆಯನ್ನು ಹಿಂದುಸ್ಥಾನ ಕೋಕೋಕೋಲಾ ಬೆವೆರೇಜಸ್ಸ್ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಘಟಕವು ಭಾರೀ ವಿವಾದಕ್ಕೆ ಈಡಾಗಿತ್ತು. ಈ ಊರ ಜನ ಕಂಪೆನಿ ಕಾಲ್ತೆಗೆಯಬೇಕೆಂದು ಪ್ರತಿಭಟನೆ ಆರಂಭಿಸಿದ್ದರು. ಇಲ್ಲಿ ಕಂಪೆನಿ ವಿರುದ್ಧ ಮಹಿಳೆಯರು ಕೈಗೊಂಡ ಪ್ರತಿಭಟನೆಯನ್ನು ಸಾಮಾಜಿಕ ಕಾರ್ಯಕರ್ತೆ ವಂದನಾಶಿವ ಪ್ರಥಮ ಜಲ ಸಮಾವೇಶದಲ್ಲಿ ಪ್ರಸ್ತಾಪಿಸಿದ್ದರು. ಅಂತರಾಷ್ಟ್ರೀಯ ಜಾಗತೀಕರಣ ವಿರೋಧಿ ವೇದಿಕೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತ್ತು. ಕೇಂದ್ರ ಸರಕಾರವು ಕಂಪೆನಿಗಳು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ನೀರಿಗೆ ತೆರಿಗೆ ವಿಧಿಸುವ ಕುರಿತು ಚಿಂತನೆ ನಡೆಸುತ್ತಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications