‘ದೊಡ್ಡಮ್ಮ ಸೋನಿಯಾ ಪ್ರಧಾನಿ ಆಗುವುದ ದೇಶ ಒಪ್ಪುವುದಿಲ್ಲ’
‘ದೊಡ್ಡಮ್ಮ ಸೋನಿಯಾ ಪ್ರಧಾನಿ ಆಗುವುದ ದೇಶ ಒಪ್ಪುವುದಿಲ್ಲ’
ಬಿಜೆಪಿ ಹೊಸ್ತಿಲಲ್ಲಿ ಸಂಜಯ್‌ಗಾಂಧಿ ಪತ್ನೀ ಪುತ್ರ.
ದೊಡ್ಡಮ್ಮ ಸೋನಿಯಾಗಾಂಧಿಯನ್ನು ನಾನು ಗೌರವಿಸುತ್ತೇನೆ. ಆದರೆ ಅವರನ್ನು ಪ್ರಧಾನಿಯಾಗಿ ನಿರಾಕರಿಸುತ್ತೇನೆ. ಇದಕ್ಕೆ ವಿದೇಶಿ ಹುಟ್ಟು ಎಂಬುದು ಒಂದು ಅಂಶ ಮಾತ್ರ. ಇನ್ನೂ ಬೇರೆ ಅಂಶಗಳಿವೆ ಎಂದು ಸೋಮವಾರ ಸುದ್ದಿವಾಹಿನಿಯಾಂದರ ಜೊತೆ ಮಾತನಾಡಿದ ವರುಣ್ ಗಾಂಧಿ ಹೇಳಿದರು.
ಸೋನಿಯಾ ಅವರನ್ನು ಪ್ರಧಾನಿಯಾಗಿ ಒಪ್ಪುವುದಿಲ್ಲ ಎಂದ ಮಾತ್ರಕ್ಕೆ ಚುನಾವಣೆಗಳಲ್ಲಿ ಅವರ ವಿರುದ್ಧ ಕೆಲಸ ಮಾಡುತ್ತೇನೆ ಎಂದಲ್ಲ . ಸೋನಿಯಾ ಮಾತ್ರವಲ್ಲ , ಪ್ರಿಯಾಂಕಾ ಹಾಗೂ ರಾಹುಲ್ ವಿರುದ್ಧ ಕೂಡ ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಪ್ರಚಾರ ಮಾಡುವುದಿಲ್ಲ. ವೈಯುಕ್ತಿಕವಾಗಿ ಅವರನ್ನು ನಾನು ಗೌರವಿಸುತ್ತೇನೆ ಎಂದು ವರುಣ್ ಸ್ಪಷ್ಟಪಡಿಸಿದರು.
ಪ್ರಧಾನಿಯ ಆಯ್ಕೆ ಮಹತ್ವದ್ದಾಗಿದೆ. ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಅಭಿವೃದ್ಧಿ ಹೊಂದಿದ ದೇಶವಾಗಲು ಅನುಭವ ಹೊಂದಿದ ಸೂಕ್ತ ನಾಯಕತ್ವ ಬೇಕಾಗಿದೆ. ಅದಕ್ಕಾಗಿ ವಾಜಪೇಯಿಯನ್ನು ಬೆಂಬಲಿಸುತ್ತೇನೆ ಎಂದು ಅವರು ನುಡಿದರು. ಕುಟುಂಬದ ರಾಜಕೀಯದ ವಿಭಿನ್ನ ನಿಲುವಿನ ಕುರಿತಾಗಿ ಅವರು- 20 ವರ್ಷಗಳ ಹಿಂದೆ ಎಲ್ಲ ಬೇರೆಯಾಗಿತ್ತು. ಆದರೀಗ ಕಾಲ ಬದಲಾಗಿದೆ. ಅವರು ಕಾಂಗೈಯಲ್ಲಿ ಚೆನ್ನಾಗಿದ್ದಾರೆ, ನಾವು ಬಿಜೆಪಿಯಲ್ಲಿ ಚೆನ್ನಾಗಿದ್ದೇವೆ ಎಂದರು. ಬಿಜೆಪಿ ಸೇರಲು ಆ ಪಕ್ಷದಲ್ಲಿರುವ ವಾಜಪೇಯಿ ಹಾಗೂ ಅಡ್ವಾಣಿಯವರ ನಾಯಕತ್ವ ಕಾರಣ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುವ ಮುನ್ನ - ತಮ್ಮ ತಾಯಿ ಮನೇಕಾ ಗಾಂಧಿ ಜೊತೆ ಪ್ರಧಾನಿ ವಾಜಪೇಯಿಯನ್ನು ಅವರ ರೇಸ್ ಕೋರ್ಸ್ ನಿವಾಸದಲ್ಲಿ ವರುಣ್‌ಗಾಂಧಿ ಭೇಟಿ ಮಾಡಿ, ಬಿಜೆಪಿ ಸೇರುವ ತಮ್ಮ ಇರಾದೆ ವ್ಯಕ್ತಪಡಿಸಿದರು. ಮನೇಕಾ ಗಾಂಧಿ ಹಿಂದೆ ವಾಜಪೇಯಿ ಸಂಪುಟದಲ್ಲಿ ಸಚಿವೆಯಾಗಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications