10.5 ಕೋಟಿ ರು.ಗಳಲ್ಲಿ ತಲಕಾವೇರಿ ದೇಗುಲ ಜೀರ್ಣೋದ್ಧಾರ
10.5 ಕೋಟಿ ರು.ಗಳಲ್ಲಿ ತಲಕಾವೇರಿ ದೇಗುಲ ಜೀರ್ಣೋದ್ಧಾರ
ಕೊಡಗು ಜನರ ಸಂಪ್ರದಾಯ-ಭಾವನೆಗಳಿಗೆ ಧಕ್ಕೆಯಾಗದಂತೆ ಕಾಮಗಾರಿ
ತಲಕಾವೇರಿ ಮತ್ತು ಭಾಗಮಂಡಲದಲ್ಲಿನ ದೇಗುಲಗಳನ್ನು ಅವುಗಳ ಮೂಲ ಸ್ವರೂಪಕ್ಕೆ ಧಕ್ಕೆ ಬರದಂತೆ ಅಭಿವೃದ್ಧಿಪಡಿಸಲಾಗುವುದು. ಕೊಡಗು ಜನರ ಸಂಪ್ರದಾಯ ಹಾಗೂ ಭಾವನೆಗಳಿಗೆ ಧಕ್ಕೆಯಾಗದಂತೆ ಈ ಕಾಮಗಾರಿಗಳು ನಡೆಯಲಿವೆ ಎಂದು ಕಾವೇರಿ ಜಲಾನಯನ ಪ್ರದೇಶದ ಭಾರೀ ಮತ್ತು ಮಧ್ಯಮ ನೀರಾವರಿ ಸಚಿವ ಎಂ.ಶಿವಣ್ಣ ಭಾನುವಾರ ತಿಳಿಸಿದರು. ತಲಕಾವೇರಿಯಲ್ಲಿನ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ ನೆರವೇರಿಸಿ ಸಚಿವ ಶಿವಣ್ಣ ಮಾತನಾಡುತ್ತಿದ್ದರು.
ತಲಕಾವೇರಿ ಮತ್ತು ಭಾಗಮಂಡಲದಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ 10.5 ಕೋಟಿ ರುಪಾಯಿಗಳ ಯೋಜನೆಯನ್ನು ತಲಕಾವೇರಿ ಮತ್ತು ಭಾಗಮಂಡಲ ಅಭಿವೃದ್ಧಿ ಪ್ರಾಧಿಕಾರ ರೂಪಿಸಿದೆ. ಈ ಕಾಮಗಾರಿಗಳು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಸಚಿವ ಶಿವಣ್ಣ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications