ವಿಧಾನಸಭೆ ವಿಸರ್ಜನೆಗೆ ಸಂಪುಟ ಅಸ್ತು ; ಫೆ. 23 ವಿಸರ್ಜನೆ ?
ವಿಧಾನಸಭೆ ವಿಸರ್ಜನೆಗೆ ಸಂಪುಟ ಅಸ್ತು ; ಫೆ. 23 ವಿಸರ್ಜನೆ ?
ಕೃಷ್ಣರ ಮೀನಾಮೇಷಕ್ಕೆ ತೆರೆ, ಚುನಾವಣೆಗೆ ಸಿದ್ಧತೆ
ವಿಧಾನಸಭೆ ವಿಸರ್ಜಿಸಿ, ಲೋಕಸಭೆಯಾಂದಿಗೆ ಚುನಾವಣೆ ಎದುರಿಸುವ ನಿರ್ಧಾರವನ್ನು ಸೋಮವಾರ ನಡೆದ ಸಂಪುಟ ಸಭೆ ಕೈಗೊಂಡಿತು. ಫೆಬ್ರವರಿ 23ರಂದು ವಿಧಾನಧಿಸಭೆಯನ್ನು ವಿಸರ್ಜಿಸಲಾಗುವಂತೆ ರಾಜ್ಯಪಾಲರನ್ನು ಕೋರಲಾಗುವುದು ಎಂದು ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ ತಿಳಿಸಿದರು.
ವಿಧಾನಸಭೆ ವಿಸರ್ಜನೆಯ ಕುರಿತು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಅವರ ನಡುವೆ ಭಿನ್ನಾಭಿಪ್ರಾಯವಿತ್ತು . ವಿಧಾನಸಭೆ ವಿಸರ್ಜಿಸಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ಎದುರಿಸಲಾಗುವುದು ಎಂದು ಬಿ.ಜನಾರ್ಧನ ಪೂಜಾರಿ ಅನೇಕ ಸಂದರ್ಭಗಳಲ್ಲಿ ಹೇಳಿದ್ದರು. ಆದರೆ ಅವಧಿಗೆ ಮುನ್ನ ಚುನಾವಣೆ ನಡೆಯುವುದಿಲ್ಲ ಎಂದು ಕೃಷ್ಣ ಸ್ಪಷ್ಟನೆ ನೀಡಿದ್ದರು.
ಪ್ರಸ್ತುತ , ವಿಧಾನಸಭೆ ವಿಸರ್ಜಿಸಲು ಸಂಪುಟ ಸಭೆ ತೀರ್ಮಾನ ಕೈಗೊಂಡಿರುವುದರಿಂದ- ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆಯುವ ಸಾಧ್ಯತೆಗಳಿವೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications