ಗುಲ್ಬರ್ಗಾದಲ್ಲಿ ಅಖಿಲಭಾರತ ಪ್ರಥಮ ವಚನ ಸಾಹಿತ್ಯಸಮ್ಮೇಳನ
ಗುಲ್ಬರ್ಗಾದಲ್ಲಿ ಅಖಿಲಭಾರತ ಪ್ರಥಮ ವಚನ ಸಾಹಿತ್ಯಸಮ್ಮೇಳನ
ಮಾರ್ಚ್ 12ರಿಂದ 14ರವರೆಗೆ ಗುಲ್ಬರ್ಗಾದಲ್ಲಿ ಶರಣರು-ಪ್ರಗತಿಪರರು
ಇದೇ ಮೊದಲ ಬಾರಿಗೆ ವಚನ ಸಾಹಿತ್ಯ ಸಮ್ಮೇಳನದ ವೇದಿಕೆ ಸಿದ್ಧವಾಗುತ್ತಿದೆ. ಮೊಟ್ಟ ಮೊದಲ ಅಖಿಲ ಭಾರತ ವಚನ ಸಾಹಿತ್ಯ ಸಮ್ಮೇಳನ 2004ರ ಮಾರ್ಚ್ 12ರಿಂದ 14ರವರೆಗೆ ಗುಲ್ಬರ್ಗಾದಲ್ಲಿ ನಡೆಯಲಿದ್ದು , ನಾಡಿನ ಎಲ್ಲ ವೀರಶೈವ ಮಠಗಳ ಮಠಾಧೀಶರು ಹಾಗೂ ಪ್ರಸಿದ್ಧ ಬರಹಗಾರರು ಈ ಸಮ್ಮೇಳನದಲ್ಲಿ ಭಾಗಿಯಾಗುವರು.
ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಸಿದ್ಧರಾಮ ಶರಣರು ಹೇಳುವ ಪ್ರಕಾರ :
- ಸಮ್ಮೇಳನಕ್ಕೆ ಪ್ರಗತಿಪರ ಚಿಂತಕರು ಹಾಗೂ ಸಾಮಾಜಿಕ ಚಳವಳಿಗಾರರನ್ನು ಆಹ್ವಾನಿಸಲಾಗುವುದು.
- ಸ್ವಾಮಿ ಅಗ್ನಿವೇಶ್, ಅಣ್ಣಾ ಹಜಾರೆ, ಭಗವಾನ್‌ದಾಸ್ ತಿವಾರಿ ಹಾಗೂ ಮಾಜಿ ರಾಜ್ಯಪಾಲೆ ವಿ.ಎಸ್.ರಮಾದೇವಿ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.
- ವಚನಗಳನ್ನು ಜನಪ್ರಿಯಗೊಳಿಸುವ ಹಾಗೂ ಇಂಗ್ಲೀಷ್, ಹಿಂದಿ ಮತ್ತಿತರ ಭಾಷೆಗಳಿಗೆ ಅನುವಾದಿಸುವ ಪ್ರಯತ್ನಗಳನ್ನು ಸಮ್ಮೇಳನ ಸ್ವಾಗತ ಸಮಿತಿ ಮಾಡುತ್ತಿದೆ.
- ಸಿದ್ಧರಾಮ ಶರಣರು ಸಂಪಾದಿಸಿರುವ ಶೂನ್ಯ ಸಂಪಾದನೆ-ರಹಸ್ಯ ಕೃತಿಯ ಎರಡು ಸಂಪುಟಗಳು ಸಮ್ಮೇಳನದಲ್ಲಿ ಬಿಡುಗಡೆಯಾಗಲಿವೆ.
- ವಚನ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲು ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಆಹ್ವಾನಿಸಲಾಗುವುದು.
- ರಾಜ್ಯಪಾಲ ಟಿ.ಎನ್.ಚತುರ್ವೇದಿ ಹಾಗೂ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸಮ್ಮೇಳನದಲ್ಲಿ ಪಾಲ್ಗೊಳ್ಳುವರು.
- ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಸಮ್ಮೇಳನದ ಅಧ್ಯಕ್ಷತೆ ವಹಿಸುವಂತೆ ಕೋರಲಾಗುವುದು.
ಮುಖಪುಟ / ವಾರ್ತೆಗಳು












Click it and Unblock the Notifications