ಕುದುರೇಮುಖದಲ್ಲಿ ಮತ್ತೆ ಚಿಗುರೊಡೆದ ನಕ್ಸಲರ ಚಟುವಟಿಕೆಗಳು
ಕುದುರೇಮುಖದಲ್ಲಿ ಮತ್ತೆ ಚಿಗುರೊಡೆದ ನಕ್ಸಲರ ಚಟುವಟಿಕೆಗಳು
ಸರ್ಕಾರ ವಿರುದ್ಧದ ಜನತೆಯ ಅಸಮಾಧಾನವನ್ನು ಸಂಘಟನೆಗೆ ಬಳಸಿಕೊಳ್ಳುತ್ತಿರುವ ನಕ್ಸಲರು
ಕಳೆದೊಂದು ವಾರದಿಂದ ಕುದುರೆಮುಖ ಅರಣ್ಯಪ್ರದೇಶದಲ್ಲಿ ಶಂಕಿತ ನಕ್ಸಲೀಯರ ಚಟುವಟಿಕೆಗಳು ಮತ್ತೆ ಕಾಣಿಸಿಕೊಂಡಿವೆ. ಮಾಗೋಡು ಮತ್ತು ಸಿಂದೋಡಿ ಬಳಿ ನಕ್ಸಲೀಯರ ಸಭೆಗಳೂ ನಡೆದಿವೆ, ನಿಲುಗುಲಿ ಪದ್ಮನಾಭ್ ಮತ್ತು ಆತನ 9 ಮಂದಿ ಸಂಗಡಿಗರು ಸಂಘಟನೆಯ ಕೆಲಸದಲ್ಲಿ ಮತ್ತೆ ತೊಡಗಿದ್ದಾರೆ ಎನ್ನಲಾಗಿದೆ.
ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈ ಪ್ರದೇಶ ಅಭಿವೃದ್ಧಿಯಿಂದ ವಂಚಿತವಾಗಿದ್ದು , ಅರಣ್ಯ ಪ್ರದೇಶದ ಜನರಲ್ಲಿನ ವ್ಯಾಪಕ ಅಸಮಾಧಾನವನ್ನು ತಮ್ಮ ಚಟುವಟಿಕೆಗಳಿಗೆ ಬಳಸಿಕೊಳ್ಳಲು ನಕ್ಸಲೀಯರು ಪ್ರಯತ್ನಿಸುತ್ತಿದ್ದಾರೆ. ಕುದುರೇಮುಖ ಅರಣ್ಯಪ್ರದೇಶದಲ್ಲಿ ಇಷ್ಟೆಲ್ಲಾ ಚಟುವಟಿಕೆಗಳು ನಡೆಯುತ್ತಿದ್ದರೂ, ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನೇತ್ತುತ್ವದ ಸಂಪುಟ- ಬೀಳ್ಕೊಡುಗೆ ಕೂಟಗಳಲ್ಲಿ , ಚುನಾವಣೆಯ ಮಂತ್ರಾಲೋಚನೆ ಸಭೆಗಳಲ್ಲಿ ಬಿಡುವಿಲ್ಲದಂತೆ ತೊಡಗಿಕೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications