ಲಂಚ ಸ್ವೀಕರಿಸೆವು! ಮೈಸೂರು ಜಿಲ್ಲೆ ಪತ್ರಕರ್ತರಿಂದ ಪ್ರತಿಜ್ಞಾವಿಧಿ

ಲಂಚ ಸ್ವೀಕರಿಸೆವು! ಮೈಸೂರು ಜಿಲ್ಲೆ ಪತ್ರಕರ್ತರಿಂದ ಪ್ರತಿಜ್ಞಾವಿಧಿ
ಲಂಚ ನೀಡಲು ಪ್ರಯತ್ನಿಸಿದ ಕಾಂಗ್ರೆಸ್‌ ಮುಖಂಡರಿಗೆ ಛೀಮಾರಿ

ಮೈಸೂರು : ಕಾಂಗ್ರೆಸ್‌ ಮುಖಂಡರೊಬ್ಬರು ಕೆಲವು ಪತ್ರಕರ್ತರಿಗೆ ಲಂಚ ನೀಡಲು ಪ್ರಯತ್ನಿಸಿದರು ಎನ್ನುವ ಪ್ರಕರಣದ ಕುರಿತು, ನಗರದ ಮಹಾತ್ಮಗಾಂಧಿ ಪ್ರತಿಮೆಯ ಎದುರು ಪತ್ರಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಹಲವು ಪತ್ರಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು , ಪತ್ರಕರ್ತರಿಗೆ ಲಂಚದ ಆಮಿಷ ತೋರಿಸಿದ ಕಾಂಗ್ರೆಸ್‌ ನಾಯಕರ ಕೃತ್ಯವನ್ನು ಖಂಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಮೈಸೂರು ವರದಿಗಾರರ ಕೂಟ ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು .

ಇದೇ ಸಂದರ್ಭದಲ್ಲಿ , ನಾವು ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ . ಯಾರಿಂದಲೂ ಲಂಚ ಸ್ವೀಕರಿಸುವುದಿಲ್ಲ . ಪತ್ರಿಕೋದ್ಯಮದ ವೃತ್ತಿಪರತೆ ಹಾಗೂ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂದು ಪತ್ರಕರ್ತರು ಪ್ರಮಾಣವಚನ ಸ್ವೀಕರಿಸಿದರು. ಜಿಲ್ಲಾಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಂಬುಕೇಶ್ವರ ಪ್ರತಿಜ್ಞಾವಿಧಿ ಬೋಧಿಸಿದರು.

ಪತ್ರಕರ್ತರ ಈ ಪ್ರತಿಭಟನೆ ಹಾಗೂ ಪ್ರತಿಜ್ಞೆ ಭ್ರಷ್ಟ ರಾಜಕಾರಣಿಗಳಿಗೆ ಎಚ್ಚರಿಕೆಯ ಘಂಟೆಯಾಗಿದೆ ಎಂದು ಪತ್ರಕರ್ತರ ಸಂಘ ಅಭಿಪ್ರಾಯಪಟ್ಟಿದೆ.

ಫೆ.9ರಂದು ಕೆಪಿಸಿಸಿ ವೀಕ್ಷಕ ಚಿನ್ನಸ್ವಾಮಿ ಅವರು ಪತ್ರಕರ್ತರಿಗೆ ಲಂಚದ ಆಮಿಷ ತೋರಿಸಿದ್ದರು. 500 ರುಪಾಯಿ ನಗದು ಹಾಗೂ ಕೈಗಡಿಯಾರ ನೀಡಲು ಚಿನ್ನಸ್ವಾಮಿ ಪ್ರಯತ್ನಿಸಿದ್ದರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+