ದೆಹಲಿಯಲ್ಲಿ ದೇಶದ ಮೊದಲ ಅಂತರ ರಾಷ್ಟ್ರೀಯ ಬೌದ್ಧ ಮೇಳ
ದೆಹಲಿಯಲ್ಲಿ ದೇಶದ ಮೊದಲ ಅಂತರ ರಾಷ್ಟ್ರೀಯ ಬೌದ್ಧ ಮೇಳ
ಬೌದ್ಧರ ಸಮಾವೇಶಕ್ಕೆ ಪ್ರವಾಸೋದ್ಯಮದ ಲೇಪ !
ಭಾರತದಲ್ಲಿ ಈ ರೀತಿಯ ಸಮಾವೇಶ ಇದೇ ಮೊದಲ ಬಾರಿ ಆಯೋಜಿಸಲಾಗಿದೆ. ಬೌದ್ಧ ಪರಂಪರೆ ಹಾಗೂ ಸಂಸ್ಕೃತಿಯನ್ನು ಸಾರುವುದು ಈ ಸಮಾವೇಶದ ಉದ್ದೇಶ. ಇದರೊಂದಿಗೆ ಬೌದ್ಧ ಯಾತ್ರಾರ್ತಿಗಳು ವೃದ್ಧಿಸಿ, ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಗಮೋಹನ ತಿಳಿಸಿದರು.
ಬೌದ್ಧ ಧರ್ಮಗುರುಗಳನ್ನು ಒಳಗೊಂಡ ಸಮಾವೇಶದ ಸಭೆಯಲ್ಲಿ ಕೇಂದ್ರ ವಿಮಾನಯಾನ ಸಚಿವ ರಾಜೀವ್ ಪ್ರತಾಪ್ ರೂಡಿ ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವ ಜಗಮೋಹನ ಮಾತನಾಡಲಿರುವರು.
ಸಮಾವೇಶ ಭಾಗವಾಗಿ ಬಿಹಾರದ ಬೋಧಗಯಾ ನಗರದ ಪ್ರಾಚೀನ ಮಹಾಬೋಧಿ ಮಂದಿರದ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಇಲ್ಲಿ ಬುದ್ಧನಿಗೆ ಜ್ಞಾನೋದಯವಾಯಿತು ಎಂದು ನಂಬಲಾಗಿದೆ. ಹಾಗೂ ಪ್ರವಾಸಿಗಳು ವಾರಣಾಸಿ ಮತ್ತು ಸಾರನಾಥ ದೇಗುಲಕ್ಕೂ ಸಂದರ್ಶನ ನೀಡಬಹುದು. ವಿದೇಶಿ ಯಾತ್ರಾರ್ತಿಗಳಿಗೆ ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸಲಾಗುವುದು. ದೆಹಲಿಯಲ್ಲಿ ಬುದ್ಧ ಉಪದೇಶ, ಛಾಯಾಚಿತ್ರ, ಚಿತ್ರಕಲೆಗಳ ಪ್ರದರ್ಶನ ನಡೆಸಲಾಗುವುದು ಎಂದು ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications