ವೃತ್ತಿಪರತೆಯಲ್ಲಿ ರಾಜ್ಯದ ವಕೀಲರು ವಿಶ್ವದಲ್ಲೇ ಅತ್ಯುತ್ತಮ -ಸಲ್ಡಾನ
ವೃತ್ತಿಪರತೆಯಲ್ಲಿ ರಾಜ್ಯದ ವಕೀಲರು ವಿಶ್ವದಲ್ಲೇ ಅತ್ಯುತ್ತಮ -ಸಲ್ಡಾನ
ನ್ಯಾಯಮೂರ್ತಿ ಸಲ್ಡಾನರಿಗೆ ಕರ್ನಾಟರ ಬಾರ್ ಅಸೋಸಿಯೇಷನ್‌ಗಳ ಒಕ್ಕೂಟದಿಂದ ಸನ್ಮಾನ
ಕರ್ನಾಟರ ಬಾರ್ ಅಸೋಸಿಯೇಷನ್‌ಗಳ ಒಕ್ಕೂಟ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ (ಫೆ.10ರಂದು) ಮಾತನಾಡಿದ ಸಲ್ಡಾನ, ರಾಜ್ಯದ ವಕೀಲರ ವೃತ್ತಿಪರತೆ ಹಾಗೂ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಮುಂಬಯಿಯಲ್ಲಿದ್ದ ಕೆಲಕಾಲವನ್ನು ನೆನಪಿಸಿಕೊಂಡ ಸಲ್ಡಾನ, ಕೆಲವೊಮ್ಮೆ ತಮಗೆ ರಾಜೀನಾಮೆ ನೀಡಬೇಕು ಅನ್ನಿಸಿದ್ದುಂಟು ಎಂದರು. ಆದರೆ, 1994ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಬಂದ ನಂತರ ರಾಜೀನಾಮೆ ನಿರ್ಧಾರ ದೂರವಾಯಿತು. ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ತಮಗೆ 7200 ಸ್ವಾಗತ-ಅಭಿನಂದನಾ ಪತ್ರಗಳು ಬಂದಿದ್ದವು ಎಂದು ಸಲ್ಡಾನ ಹೇಳಿದರು.
ನಾನು ಹುಟ್ಟಿದ್ದು ಮಂಗಳೂರಿನಲ್ಲಾದರೂ, ಕನ್ನಡ ಮಾತನಾಡಲಿಕ್ಕೆ ಸ್ವಲ್ಪ ಕಷ್ಟ . ರಾಜ್ಯದ ಹೊರಭಾಗಗಳಲ್ಲಿ ಸುಮಾರು 32 ವರ್ಷ ಕಳೆದುದೇ ಇದಕ್ಕೆ ಕಾರಣ. ಆದರೆ ಕನ್ನಡದಲ್ಲಿ ವೇಗವಾಗಿ ಬರೆಯುತ್ತೇನೆ ಮತ್ತು ಓದುತ್ತೇನೆ ಎಂದು ಸಲ್ಡಾನ ಹೇಳಿದರು.
ನಿವೃತ್ತಿಯ ನಂತರ ಲಾಯರ್‌ಗಳ ಹಿತಾಸಕ್ತಿಗಾಗಿ ದುಡಿಯಲು ಚಿಂತಿಸುತ್ತಿದ್ದೇನೆ ಎಂದು ನ್ಯಾಯಮೂರ್ತಿ ಸಲ್ಡಾನ ಇದೇ ಸಂದರ್ಭದಲ್ಲಿ ಹೇಳಿದರು. ಒಕ್ಕೂಟದ ಅಧ್ಯಕ್ಷ ಮತ್ತು ಬಿಜೆಪಿ ಶಾಸಕ ಕೆ.ಎನ್.ಸುಬ್ಬಾರೆಡ್ಡಿ , ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮರಿಯಪ್ಪ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications