‘ಪ್ರಾಣಿ ಬಲಿ’ ಮೌಢ್ಯ ಬಲಿ ಹಾಕಲು ಸುಪ್ರೀಂ ಕೋರ್ಟ್ ಆದೇಶ
‘ಪ್ರಾಣಿ ಬಲಿ’ ಮೌಢ್ಯ ಬಲಿ ಹಾಕಲು ಸುಪ್ರೀಂ ಕೋರ್ಟ್ ಆದೇಶ
ಬಿ.ಕೃಷ್ಣ ಭಟ್ ಸತತ ಹೋರಾಟಕ್ಕೆ ಸ್ಪಂದಿಸಿದ ನ್ಯಾಯಪೀಠ
ಪ್ರಾಣಿ ಹಾಗೂ ಪಕ್ಷಿ ಸಂಕುಲ ಕಾಯ್ದೆಯನ್ನು ಕರ್ನಾಟಕ ರಾಜ್ಯ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ವಿಫಲವಾಗಿದೆ ಎಂದು ಸುಪ್ರಿಂಕೋರ್ಟ್ ಆಕ್ಷೇಪಿಸಿದೆ. ಈ ಮೂಕ ಪ್ರಾಣಿಗಳ ವೇದನೆಯನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ದವರು ಬಿ.ಕೃಷ್ಣ ಭಟ್. ಈ ಹಿಂದೆ ಹೈಕೋರ್ಟ್‌ನಲ್ಲಿ ಅವರು ಸಲ್ಲಿಸಿದ ಅರ್ಜಿ ಮೂಕ ಮೊರೆಯಂತೆ ತಿರಸ್ಕರಿಸಲ್ಪಟ್ಟಿತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವೈ,ಕೆ.ಸಬರ್‌ವಾಲ್ ಮತ್ತು ಎಸ್.ಬಿ.ಸಿನ್ಹಾ ರನ್ನು ಒಳಗೊಂಡ ನ್ಯಾಯಪೀಠ ಪ್ರತಿವಾದಿಗಳಿಗೆ ನಾಲ್ಕು ವಾರದೊಳಗೆ ಪ್ರಮಾಣಪತ್ರ ಸಲ್ಲಿಸಬೇಕೆಂದು ಮಂಗಳವಾರ ಆದೇಶಿಸಿದೆ. ಸರಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಆದೇಶದಲ್ಲಿ ಪ್ರತಿವಾದಿಗಳೆಂದು ಉಲ್ಲೇಖಿಸಲಾಗಿದೆ.
ರಾಜ್ಯದ ಹೆಚ್ಚಿನೆಡೆ ನಡೆಯುತ್ತಿರುವ ಬಲಿ ಪದ್ಧತಿ ವಿರೋಧಿಸಿ ಸಂಬಂಧ ಪಟ್ಟವರಿಗೆ ಲಿಖಿತ ಮನವಿಯನ್ನು ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ ಎಂದು ತಮ್ಮ ಅರ್ಜಿಯಲ್ಲಿ ಕೃಷ್ಣಭಟ್ ಹೇಳಿದ್ದಾರೆ. ಇತ್ತೀಚೆಗೆ ರಾಜ್ಯದ ಸಂಪುಟ ಸಚಿವರ ಮುಂದೆಯೇ ಹರಕೆಯ ಬಲಿಯನ್ನು ನೀಡಿದ್ದು ವಿವಾದಕ್ಕೆ ಎಡೆಮಾಡಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications