‘ಮಟ್ಟೆಣ್ಣವರ್‌ ಸೇರ್ಪಡೆಯಿಂದಾಗಿ ಬಿಜೆಪಿ ಮುಖವಾಡ ಬಯಲು’

‘ಮಟ್ಟೆಣ್ಣವರ್‌ ಸೇರ್ಪಡೆಯಿಂದಾಗಿ ಬಿಜೆಪಿ ಮುಖವಾಡ ಬಯಲು’
ಲೋಕಸಭಾ ಚುನಾವಣೆಗೆ ಬಂಗಾರಪ್ಪ, ಅಂಬರೀಷ್‌, ಪುಟ್ಟಸ್ವಾಮಿಗೌಡ ಇಲ್ಲ

ಬೆಂಗಳೂರು : ಶಾಸಕರ ಭವನದಲ್ಲಿ ಸ್ಫೋಟಕಗಳನ್ನು ಇರಿಸಿದ್ದ ಗಿರೀಶ್‌ ಮಟ್ಟೆಣ್ಣವರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಭಾರತೀಯ ಜನತಾ ಪಕ್ಷದ ಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ತೀವ್ರವಾಗಿ ಟೀಕಿಸಿದ್ದಾರೆ.

ಕ್ರಿಮಿನಲ್‌ ಹಿನ್ನೆಲೆಯ ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ತಪ್ಪು ಮಾಡಿದೆ. ಶಾಸಕರ ಭವನದಲ್ಲಿ ಸ್ಫೋಟಕಗಳನ್ನು ಇರಿಸುವ ಮೂಲಕ ಗಿರೀಶ್‌ ಮಟ್ಟೆಣ್ಣವರ್‌ ಅಲ್ಲಕಲ್ಲೋಲ ಉಂಟು ಮಾಡಲು ಪ್ರಯತ್ನಿಸಿದ್ದ . ಈ ಮೂಲಕ ಆತ ಅಪರಾಧ ಎಸಗಿದ್ದಾನೆ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ ಹೇಳಿದರು.

ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುತ್ತೇವೆ ಎಂದು ಮಾತನಾಡುವ ಬಿಜೆಪಿ ಕ್ರಿಮಿನಲ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಇದರಿಂದಾಗಿ ಬಿಜೆಪಿಯ ಮುಖವಾಡ ಕಳಚಿದಂತಾಗಿದೆ ಎಂದು ಪೂಜಾರಿ ವ್ಯಂಗ್ಯವಾಡಿದರು.

ತೆಹಲ್ಕಾ, ಜೂಡೊ, ಹುಡ್ಕೋ ಮುಂತಾದ ಪ್ರಕರಣಗಳಲ್ಲಿ ಬಿಜೆಪಿಯ ಭ್ರಷ್ಟತೆಯನ್ನು ಬಯಲಿಗೆಳೆಯಲು ಕಾಂಗ್ರೆಸ್‌ ನಿರ್ಧರಿಸಿದೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯ ಭ್ರಷ್ಟ ್ಫಮುಖವನ್ನು ಜನರೆದುರು ಅನಾವರಣಗೊಳಿಸಲಾಗುವುದು ಎಂದು ಪೂಜಾರಿ ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ , ಸಂಸದರಾದ ಜಿ.ಪುಟ್ಟಸ್ವಾಮಿ ಗೌಡ (ಹಾಸನ), ಅಂಬರೀಶ್‌ (ಮಂಡ್ಯ) ಮತ್ತು ಬಂಗಾರಪ್ಪ (ಶಿವಮೊಗ್ಗ) ಅನಾರೋಗ್ಯದ ಕಾರಣ ಸ್ಪರ್ಧಿಸುವುದಿಲ್ಲವೆಂದು ಪತ್ರ ಬರೆದಿರುವುದಾಗಿ ಪೂಜಾರಿ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+