ಚುನಾವಣಾ ಜ್ವರದಿಂದಾಗಿ ‘ಬೆಂಗಳೂರು ಬಯೋಮೇಳ’ ಮುಂದಕ್ಕೆ
ಚುನಾವಣಾ ಜ್ವರದಿಂದಾಗಿ ‘ಬೆಂಗಳೂರು ಬಯೋಮೇಳ’ ಮುಂದಕ್ಕೆ
ಬಯೋಟೆಕ್ ಪಾರ್ಕ್ ನೀಲನಕ್ಷೆ ಸಿದ್ಧ, ಶೀಘ್ರದಲ್ಲೇ ಟೆಂಡರ್ ಆಹ್ವಾನ
ಮುಂಬರುವ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಬೆಂಗಳೂರು ಜೈವಿಕ ತಂತ್ರಜ್ಞಾನ ಮೇಳವನ್ನು ಏಪ್ರಿಲ್ ಬದಲು ಮೇ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ತಂತ್ರಜ್ಞನ ಸಚಿವ ಡಿ.ಬಿ.ಇನಾಂದಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ದೇಶದಲ್ಲಿಯೇ ಅತ್ಯಂತ ದೊಡ್ಡ ಜೈವಿಕ ತಂತ್ರಜ್ಞಾನ ಮೇಳ ಎನ್ನುವ ಅಗ್ಗಳಿಕೆಗೆ ಬೆಂಗಳೂರು ಬಯೋಮೇಳ ಪಾತ್ರವಾಗಿದೆ.
ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಯೋಟೆಕ್ ಪಾರ್ಕ್‌ನ ನಕ್ಷೆಯನ್ನು ವಾಸ್ತುಶಿಲ್ಪಿಗಳು ಸಿದ್ಧಪಡಿಸಿದ್ದಾರೆ. ಕಟ್ಟಡ ನಿರ್ಮಾಣದ ಟೆಂಡರ್‌ಗಳನ್ನು ಶೀಘ್ರವೇ ಕರೆಯಲಾಗುವುದು ಎಂದು ಇನಾಂದಾರ್ ಹೇಳಿದರು.
ಸಚಿವ ಡಿ.ಬಿ.ಇನಾಂದಾರ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕರ್ನಾಟಕ ವಿಷನ್ ಗ್ರೂಪ್ ಆಫ್ ಬಯೋಟೆಕ್ನಾಲಜಿಯ ಕಿರಣ್ ಮಜುಂದಾರ್ ಷಾ, ಬಯೋಮೇಳದ ಧ್ಯೇಯೋದ್ದೇಶಗಳ ವಿವರಿಸಿದರು. ವ್ಯಾಕ್ಸೀನ್‌ಗಳು, ಇಮ್ಯುನೋ ಥೆರಪಿ, ಸಾಂಕ್ರಾಮಿಕ ರೋಗಗಳು, ಬಯೋ ಪ್ರೊಸೆಸಿಂಗ್ ಆಪರೇಷನ್‌ಗಳು, ಇತ್ಯಾದಿ ವಿಷಯಗಳು ಈ ಬಾರಿಯ ಬಯೋಮೇಳದಲ್ಲಿ ಪ್ರಮುಖವಾಗಿ ಚರ್ಚೆಗೆ ಒಳಪಡಲಿವೆ ಎಂದು ಕಿರಣ್ ಷಾ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications