‘ಬಾಂಬ್ ಎಸ್ ಐ’ ಗಿರೀಶ್ ಲೋಕನಾಥ್ ಮಟ್ಟೆಣ್ಣವರ್ ಬಿಜೆಪಿಗೆ
‘ಬಾಂಬ್ ಎಸ್ ಐ’ ಗಿರೀಶ್ ಲೋಕನಾಥ್ ಮಟ್ಟೆಣ್ಣವರ್ ಬಿಜೆಪಿಗೆ
ಮುಂಬರುವ ಚುನಾವಣೆಗಳಲ್ಲಿ ಮಟ್ಟೆಣ್ಣವರ್ ಸ್ಪರ್ಧೆ
ಇತರ ಪಕ್ಷಗಳಿಗಿಂತ ಹೆಚ್ಚು ಶಿಸ್ತುಬದ್ಧವಾದುದರಿಂದ ಬಿಜೆಪಿಗೆ ಸೇರಿದ್ದೇನೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ವೇದಿಕೆಯಾಂದು ಅಗತ್ಯವಾಗಿದ್ದು , ಈ ನಿಟ್ಟಿನಲ್ಲಿ ಬಿಜೆಪಿಯನ್ನು ಆಯ್ದುಕೊಂಡಿದ್ದಾಗಿ ಬಿಜೆಪಿಗೆ ಸೇರ್ಪಡೆ ಹೊಂದಿದ ಸಂದರ್ಭದಲ್ಲಿ ಗಿರೀಶ್ ಮಟ್ಟೆಣ್ಣವರ್ ಹೇಳಿದರು.
ಆರ್‌ಎಸ್‌ಎಸ್‌ನೊಂದಿಗೆ ತಮ್ಮ ದಿನಗಳನ್ನು ನೆನಪಿಸಿಕೊಂಡ ಮಟ್ಟೆಣ್ಣವರ್, ತಾವು ಪ್ರಧಾನಿ ವಾಜಪೇಯಿ ಅವರ ನಾಯಕತ್ವದಿಂದಲೂ ಪ್ರಭಾವಿತರಾಗಿ ಬಿಜೆಪಿ ಸೇರಿದ್ದಾಗಿ ಹೇಳಿಕೊಂಡರು. ವಾಜಪೇಯಿ ಅವರದು ಕಲಂಕ ರಹಿತ ವ್ಯಕ್ತಿತ್ವ . ಅವರು ದೇಶದ ಗೌರವವನ್ನು ಜಾಗತಿಕವಾಗಿ ಉನ್ನತ ಮಟ್ಟಕ್ಕೊಯ್ದ ನಾಯಕ ಎಂದು ಗಿರೀಶ್ ಬಣ್ಣಿಸಿದರು.
ಹಿಂಸೆಯಲ್ಲಿ ನನಗೆ ನಂಬಿಕೆಯಿಲ್ಲ . ಈವರೆಗೆ ನಾನು ಮಾಡಿರುವುದು ಭ್ರಷ್ಟಾಚಾರದ ವಿರುದ್ಧ ಎಚ್ಚರಿಕೆಯ ಕರೆಗಂಟೆ ಕೆಲಸ ಮಾತ್ರ ಎಂದ ಮಟ್ಟೆಣ್ಣವರ್, ಚುನಾವಣೆಗಳಲ್ಲಿ ಭಾಗವಹಿಸಲು ತಾವು ಅರ್ಹವಾಗಿರುವುದಾಗಿ ಹೇಳಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ್- ಭ್ರಷ್ಟಾಚಾರ ವಿರುದ್ಧದ ಹೋರಾಟದ ಸಂಕೇತ ಎಂದು ಮಟ್ಟೆಣ್ಣವರ್‌ರನ್ನು ಪ್ರಶಂಸಿಸಿದರು.
(ಪಿಟಿಐ)
ಮಟ್ಟೆಣ್ಣವರ್ ರಾಜಕೀಯ ಸೇರಿದ್ದನ್ನು ಬೆಂಬಲಿಸುತ್ತೀರಾ ?
ಮುಖಪುಟ / ವಾಟ್ಸ್ ಹಾಟ್












Click it and Unblock the Notifications