ಬೀದರ್‌ ಪಶು ವಿವಿಗೆ ಜಗಜ್ಜೋತಿ ಬಸವಣ್ಣನ ಹೆಸರೇ... ಶಿವ ಶಿವ !

ಬೀದರ್‌ ಪಶು ವಿವಿಗೆ ಜಗಜ್ಜೋತಿ ಬಸವಣ್ಣನ ಹೆಸರೇ... ಶಿವ ಶಿವ !
ಸರ್ಕಾರದ ನಿರ್ಧಾರಕ್ಕೆ ವೀರಶೈವ ಮಹಾಸಭಾದ ತೀವ್ರ ವಿರೋಧ

ಬೀದರ್‌ : ಇಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಪಶು ವಿಶ್ವ ವಿದ್ಯಾಲಯಕ್ಕೆ ಬಸವಣ್ಣನ ಹೆಸರಿಡುವ ಸರ್ಕಾರದ ನಿರ್ಧಾರಕ್ಕೆ ವೀರಶೈವ ಮಹಾಸಭಾ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಬೀದರ್‌ ಪಶು ವಿವಿಗೆ ಬಸವಣ್ಣನವರ ಹೆಸರಿಡಲು ಚಿಂತಿಸುವ ಮೂಲಕ ಅವರನ್ನು ಅವಮಾನಿಸಲಾಗುತ್ತಿದೆ. ಮಹಾನ್‌ ವ್ಯಕ್ತಿತ್ವದ ಹೆಸರನ್ನು ಸೀಮಿತ ಉದ್ದೇಶದ ವಿವಿಗೆ ನಾಮಕರಣ ಮಾಡುವುದು ಸಲ್ಲದು ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಭೀಮಣ್ಣ ಖಂಡ್ರೆ ತಿಳಿಸಿದ್ದಾರೆ.

ಮನುಷ್ಯನನ್ನು ಉನ್ನತಿಗೆ ಏರಿಸಲು ಬಸವಣ್ಣನವರು ಹೋರಾಟ ನಡೆಸಿದರೇ ಹೊರತು ಪಶುಗಳ ಕುರಿತಾಗಲ್ಲ . ಒಂದುವೇಳೆ ಪಶು ವಿವಿಗೆ ಬಸವಣ್ಣನವರ ಹೆಸರಿಟ್ಟರೆ, ಅವರ ಸಾಧನೆಗಳನ್ನು ಪಶುಗಳ ಉದ್ಧಾರದೊಂದಿಗೆ ತಳುಕು ಹಾಕಿದಂತಾಗುತ್ತದೆಯೇ ಹೊರತು ಮಾನವ ಕಲ್ಯಾಣದ ಹೋರಾಟಕ್ಕಾಗಿಯಲ್ಲ ಎಂದು ಖಂಡ್ರೆ ಹೇಳಿದರು.

ಗುಲ್ಬರ್ಗಾ ವಿವಿಗೆ ಬಸವೇಶ್ವರರ ಹೆಸರು ಇಡುವಂತೆ ಕೆಲವು ವರ್ಷಗಳ ಹಿಂದೆ ವೀರಶೈವ ಸಮುದಾಯ ಹೋರಾಟ ನಡೆಸಿದುದನ್ನು ಸ್ಮರಿಸಿಕೊಂಡ ಖಂಡ್ರೆ- ಪಶು ವಿವಿಗೆ ಯಾವುದೇ ಕಾರಣಕ್ಕೂ ಬಸವೇಶ್ವರರ ಹೆಸರು ನಾಮಕರಣ ಮಾಡಕೂಡದು ಎಂದರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+