ಸಚಿವ ಶ್ರೀನಿವಾಸಪ್ರಸಾದ್ 2 ವರ್ಷ ಚುನಾವಣೆಯಿಂದ ವಿಶ್ರಾಂತಿ
ಸಚಿವ ಶ್ರೀನಿವಾಸಪ್ರಸಾದ್ 2 ವರ್ಷ ಚುನಾವಣೆಯಿಂದ ವಿಶ್ರಾಂತಿ
ಸಕ್ರಿಯ ರಾಜಕೀಯದಲ್ಲಿ ಮುಂದುವರಿಕೆ, ಹೋರಾಟದ ದಣಿವಿನಿಂದಾಗಿ ವಿಶ್ರಾಂತಿಯ ಬಯಕೆ...
ಮೈಸೂರು ವರದಿಗಾರರ ಕೂಟ ಏರ್ಪಡಿಸಿದ್ದ ಮುಖಾಮುಖಿಯಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದ ಸಚಿವ ಶ್ರೀನಿವಾಸಪ್ರಸಾದ್- ಮುಂಬರುವ ಚುನಾವಣೆಗಳಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದರು. ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ ಶ್ರೀನಿವಾಸಪ್ರಸಾದ್- ಚುನಾವಣಾ ರಾಜಕೀಯಕ್ಕೆ ಎರಡು ವರ್ಷಗಳ ಕಾಲ ಬಿಡುವು ನೀಡುವ ಇಂಗಿತ ವ್ಯಕ್ತಪಡಿಸಿದರು.
1974ರಿಂದಲೂ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದು , ಈವರೆಗೆ 10 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಸೋಲು ಹಾಗೂ ಗೆಲುವಿನ ರುಚಿ ಕಂಡಿದ್ದೇನೆ. ಚುನಾವಣೆಗಳಿಂದ ದಣಿದಿದ್ದು , ಕನಿಷ್ಠ ಎರಡು ವರ್ಷಗಳ ವಿಶ್ರಾಂತಿಯಾದರೂ ಬೇಕೆನ್ನಿಸುತ್ತಿದೆ ಎಂದು ಹೇಳಿದರು.
ಜಾತ್ಯತೀತ ಜನತಾದಳ ರಾಜ್ಯದಲ್ಲಿ ಬಲಗೊಂಡಿದೆ ಎಂದ ಶ್ರೀನಿವಾಸಪ್ರಸಾದ್- ತಾವು ಜಾತ್ಯತೀತ ಜನತಾದಳ ಸೇರುವ ಕುರಿತ ಊಹಾಪೋಹಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
1999ರಲ್ಲಿ , ಚಾಮರಾಜನಾಗರ ಲೋಕಸಭಾ ಕ್ಷೇತ್ರದಲ್ಲಿ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿ ಗೆದ್ದಿದ್ದ ಶ್ರೀನಿವಾಸಪ್ರಸಾದ್- ಆನಂತರದ ದಿನಗಳಲ್ಲಿ ಸಮತಾ ಪಕ್ಷದ ಜಾರ್ಜ್ ಫರ್ನಾಂಡಿಸ್‌ರ ಕರೆಗೆ ಓಗೊಟ್ಟಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications