ಗುಲ್ಬರ್ಗಾದ ಬಸವೇಶ್ವರ ಆಸ್ಪತ್ರೆಯಲ್ಲಿ ಟೆಲಿ ಮೆಡಿಸಿನ್ ಸವಲತ್ತು
ಗುಲ್ಬರ್ಗಾದ ಬಸವೇಶ್ವರ ಆಸ್ಪತ್ರೆಯಲ್ಲಿ ಟೆಲಿ ಮೆಡಿಸಿನ್ ಸವಲತ್ತು
ವೊಕ್ಹಾರ್ಟ್ ಆಸ್ಪತ್ರೆಯಾಂದಿಗೆ ಒಪ್ಪಂದ, ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಹೃದ್ರೋಗಿಗಳಿಗೆ ವರದಾನ
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಮಾಜ ನಡೆಸುತ್ತಿರುವ ಮಹದೇವಪ್ಪ ರಮಾಪುರೆ ಮೆಡಿಕಲ್ ಕಾಲೇಜಿನ ಅಂಗಸಂಸ್ಥೆಯಾದ ಬಸವೇಶ್ವರ ಬೋಧನೆ ಮತ್ತು ಜನರಲ್ ಆಸ್ಪತ್ರೆಯಲ್ಲಿ ಟೆಲಿ ಮೆಡಿಸಿನ್ ವಿಭಾಗ ಇತ್ತೀಚೆಗೆ ಪ್ರಾರಂಭವಾಯಿತು. ಬೆಂಗಳೂರಿನ ವೊಕ್ಹಾರ್ಟ್ ಆಸ್ಪತ್ರೆಯ ಪ್ರಸಿದ್ಧ ಹೃದ್ರೋಗ ತಜ್ಞ ಡಾ.ವಿವೇಕ್ ಜವಳಿ ಅವರೊಂದಿಗೆ ಸಂವಾದ ನಡೆಸುವ ಮೂಲಕ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಮಾಜದ ಅಧ್ಯಕ್ಷ ಬಿ.ಜಿ.ಜವಳಿ ಟೆಲಿ ಮೆಡಿಸಿನ್ ಸೌಲಭ್ಯಕ್ಕೆ ಚಾಲನೆ ನೀಡಿದರು.
ಶಾಮರಾವ್ ಎನ್ನುವ 60 ವರ್ಷದ ವೃದ್ಧರು ಟೆಲಿ ಮೆಡಿಸಿನ್ ಸವಲತ್ತಿನ ಮೂಲಕ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮೊತ್ತಮೊದಲ ರೋಗಿ ಎನ್ನಿಸಿಕೊಂಡರು. ಟೆಲಿ ಮೆಡಿಸಿನ್ ಸಂವಾದದ ಮೂಲಕ ಹೃದಯ ಬೇನೆಯಿಂದ ನರಳುತ್ತಿರುವ ಶಾಮರಾವ್ ಅವರಿಗೆ ಡಾ.ವಿವೇಕ್ ಜವಳಿ ಸಲಹೆ ಸಾಂತ್ವನ ನೀಡಿದರು. ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗುವಂತೆ ಶಾಮರಾವ್ ಅವರಿಗೆ ಡಾ.ವಿವೇಕ್ ಜವಳಿ ಸಲಹೆ ನೀಡಿದರು.
ಪ್ರಸ್ತುತ ಬೆಂಗಳೂರಿನ ವೊಕ್ಹಾರ್ಟ್ ಆಸ್ಪತ್ರೆಯಾಂದಿಗಿನ ಒಪ್ಪಂದದಿಂದಾಗಿ ಹೃದ್ರೋಗಕ್ಕೆ ಮಾತ್ರ ಟೆಲಿ ಮೆಡಿಸಿನ್ ಚಿಕಿತ್ಸೆ ಮೀಸಲಾಗಿದೆ. ಆದರೆ, ಇತರ ರೋಗಗಳಿಗೂ ಚಿಕಿತ್ಸೆ ನೀಡುವ ಉದ್ದೇಶದಿಂದ ಬೆಂಗಳೂರು ಮತ್ತು ಹೈದರಾಬಾದ್‌ನ ಪ್ರಖ್ಯಾತ ಆಸ್ಪತ್ರೆಗಳೊಂದಿಗೆ ಒಪ್ಪಂದ ಸಾಧಿಸಲು ಪ್ರಯತ್ನ ನಡೆಸಲಾಗುವುದು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಮಾಜದ ಅಧ್ಯಕ್ಷ ಬಿ.ಜಿ.ಜವಳಿ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications