ಸಾಣೇಹಳ್ಳಿ ಸ್ವಾಮಿ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ಸಾಹಿತ್ಯ ಸಮ್ಮೇಳನ
ಸಾಣೇಹಳ್ಳಿ ಸ್ವಾಮಿ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ಸಾಹಿತ್ಯ ಸಮ್ಮೇಳನ
ಫೆ.21, 22ರಂದು ಹೊಸದುರ್ಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ
ಸಾಣೇಹಳ್ಳಿ ಮಠಾಧೀಶರಾದ ಪಂಡಿತಾರಾಧ್ಯರು ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಲೇಖಕರಾಗಿಯೂ ಪ್ರಸಿದ್ಧರಾಗಿದ್ದಾರೆ. ಸ್ವಾಮೀಜಿ ಅವರ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನ ಫೆ.21 ಮತ್ತು 22ರಂದು ಹೊಸದುರ್ಗದಲ್ಲಿ ನಡೆಯುವುದು ಎಂದು ಜಿಲ್ಲಾ ಕಸಾಪ ಕಾರ್ಯಕಾರಿ ಅಧ್ಯಕ್ಷ ಪಿ.ಎಲ್.ಲೋಕೇಶ್ವರ ತಿಳಿಸಿದ್ದಾರೆ.
ಮಹಿಳೆ ಹಾಗೂ ಮಹಿಳೆಯರ ಸಮಸ್ಯೆಗಳ ಕುರಿತು ಸೆಮಿನಾರ್‌ಗಳನ್ನು ಸಮ್ಮೇಳನದಲ್ಲಿ ಆಯೋಜಿಸಲಾಗಿದೆ. ಕುವೆಂಪು ಸಾಹಿತ್ಯ- ರೈತರು, ಧರ್ಮ, ಭಯೋತ್ಪಾದಕತೆ ಹಾಗೂ ಹಾಸ್ಯದ ಕುರಿತೂ ಸಮ್ಮೇಳನದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಲೋಕೇಶ್ವರ ಹೇಳಿದರು.
ಕಾಂಟ್ಸೆಸಾದಲ್ಲಿ ಕಾವ್ಯದ ಬಂಡಾಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಫೆ.21ರಂದು ಸಮ್ಮೇಳನವನ್ನು ಉದ್ಘಾಟಿಸುವರು. ಪ್ರೊ.ಚಂದ್ರಶೇಖರ ತಾಳ್ಯ, ಪ್ರೊ.ದೊಡ್ಡರಂಗೇಗೌಡ, ಡಾ.ಬಂಜಗೆರೆ ಜಯಪ್ರಕಾಶ್ ಮುಂತಾದವರು ಸಮ್ಮೇಳನದಲ್ಲಿ ಭಾಗವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications