ಲೋಕಸಭೆ ವಿಸರ್ಜನೆ : ಏರಲಿರುವ ಚುನಾವಣಾ ಬೇಗೆ

ಲೋಕಸಭೆ ವಿಸರ್ಜನೆ : ಏರಲಿರುವ ಚುನಾವಣಾ ಬೇಗೆ
ಒಂಬತ್ತು ತಿಂಗಳ ಮುನ್ನ ವಿಸರ್ಜನೆಗೊಂಡ ಲೋಕಸಭೆ

ನವದೆಹಲಿ : ಭಾರತೀಯ 13ನೇ ಲೋಕಸಭೆಯನ್ನು ಕೇಂದ್ರ ಮಂತ್ರಿಮಂಡಲದ ಪ್ರಸ್ತಾಪದ ಮೇರೆಗೆ, ಸಂವಿಧಾನದ 85ನೇ ಅನುಚ್ಛೇದಕ್ಕೆ ಅನುಗುಣವಾಗಿ ರಾಷ್ಟ್ರಪತಿ ಅಬ್ದುಲ್‌ ಕಲಾಮ್‌ ಇಂದು(ಫೆ.06) ವಿಸರ್ಜಿಸಿದರು.

ಅಕ್ಟೋಬರ್‌ 10, 1999ರಲ್ಲಿ ಆಯ್ದು ಬಂದ ಲೋಕಸಭೆ 14 ಸಮಾವೇಶವನ್ನು ಕಂಡಿದೆ. ಭಾರತದಲ್ಲಿ ಅವಧಿಗೆ ಮುನ್ನ ಲೋಕಸಭಾ ಚುನಾವಣೆ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ. ವಿಸರ್ಜನೆಗೆ ಪೂರಕವಾದ ರೈಲ್ವೇ ಬಜೆಟ್‌, ವಾರ್ಷಿಕ ಆಯವ್ಯಯ ಪತ್ರ ಹಾಗೂ ಸಂವಿಧಾನಿಕ ಚಟುವಟಿಕೆಗಳನ್ನು ಸರಕಾರ ಪೂರ್ಣಗೊಳಿಸಿದೆ.ಪ್ರಸ್ತುತ ಸರಕಾರ ಮುಂದಿನ ಚುನಾವಣೆ ಫಲಿತಾಂಶ ಹೊರಹೊಮ್ಮುವವೆರೆಗೆ ಹಂಗಾಮಿಯಾಗಿ ಕಾರ್ಯನಿರ್ವಹಿಸಲಿದೆ.

ಕೇಂದ್ರ ಸಚಿವ ಸಂಪುಟ ಜ.27 ರಂದು ಲೋಕಸಭೆ ವಿಸರ್ಜಿಸುವ ನಿರ್ಣಯ ಕೈಗೂಂಡಿತ್ತು. ಅವಧಿಗೆ ಮುನ್ನವೇ ಸಂಸತ್‌ ವಿಸರ್ಜನೆಗೆ ಕಾರಣ, ದೇಶದಲ್ಲಿ ಭಾಜಪ ಅಲೆ ಎಂದು ಆ ಪಕ್ಷ ಭಾವಿಸಿರಬಹುದು. ಬರಲಿರುವ ಚುನಾವಣೆ, ಫಲಿತಾಂಶ, ಹಾಗೂ 14ನೇ ಲೋಕಸಭೆ ಸೇರುವ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸುವುದು ಬಾಕಿ ಇದೆ. ಎಪ್ರಿಲ್‌ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಕಾಕತಾಳೀಯ ಎಂಬಂತೆ ಫೆ. 7ರಂದು ರಾಜಕಾರಣಿಗಳನ್ನು ‘ಕ್ಯಾನ್ಸ್‌ರ್‌’ ಎಂದು ಬಣ್ಣಿಸಿದ ಚುನಾವಣಾ ಆಯೋಗ ಅಧ್ಯಕ್ಷ ಲಿಂಗ್ಡೋ ಅಧಿಕಾರದಿಂದ ನಿರ್ಗಮಿಸಲಿದ್ದಾರೆ. ನೂತನ ಚುನಾವಣಾ ಆಯುಕ್ತರು ಟಿ.ಎಸ್‌. ಕೃಷ್ಣ ಮೂರ್ತಿ. ಲೋಕಸಭಾ ಚುನಾವಣೆಯ ಜೊತೆಗೆ , ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+