ಐವರು ಹೆಣ್ಣು ಮಕ್ಕಳನ್ನು ನದಿಗೆ ತಳ್ಳಿದ ಗಾಂಧಿ ನಾಡಿನ ಹತಾಶ ವ್ಯಕ್ತಿ

ಐವರು ಹೆಣ್ಣು ಮಕ್ಕಳನ್ನು ನದಿಗೆ ತಳ್ಳಿದ ಗಾಂಧಿ ನಾಡಿನ ಹತಾಶ ವ್ಯಕ್ತಿ
ಮಕ್ಕಳ ನೀರುಪಾಲು ಮಾಡಿದ ತಂದೆ ತಲೆ ತಪ್ಪಿಸಿಕೊಂಡಿದ್ದಾನೆ....

ಅಹಮದಾಬಾದ್‌ : ಬಡತನದಿಂದ ಕಂಗೆಟ್ಟ ವ್ಯಕ್ತಿಯಾಬ್ಬ ತನ್ನ ಐವರು ಹೆಣ್ಣುಮಕ್ಕಳನ್ನು ನದಿಗೆ ತಳ್ಳಿದ ದಾರುಣ ಘಟನೆ ಗುಜರಾತ್‌ನಿಂದ ವರದಿಯಾಗಿದೆ.

ದಕ್ಷಿಣ ಗುಜರಾತ್‌ನ ಭರೂಚ ಪಟ್ಟಣದ ಸಮೀಪ, ಸಲೀಮ್‌ ಗುಲಾಮ್‌ ಹುಸೇನ್‌ ಎನ್ನುವ ವ್ಯಕ್ತಿಯಾಬ್ಬ ತನ್ನ ಐವರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಒಬ್ಬರ ನಂತರ ಒಬ್ಬರನ್ನು ನರ್ಮದಾ ನದಿಗೆ ಗುರುವಾರ ತಳ್ಳಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಹೆಣ್ಣು ಮಕ್ಕಳು ಏಳು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎನ್ನಲಾಗಿದೆ.

ಮಕ್ಕಳನ್ನು ನದಿಗೆ ತಳ್ಳಿದ ವ್ಯಕ್ತಿ ಬಡತನದಿಂದ ಕಂಗೆಟ್ಟಿರುವುದೇ ಈ ಘಟನೆಗೆ ಕಾರಣವಾಗಿದೆ. ನದಿ ದಂಡೆಯಲ್ಲಿ ನಿಂತಿದ್ದ ಹೆಣ್ಣುಮಗಳೊಬ್ಬಳು ಈ ಕೃತ್ಯವನ್ನು ಕಣ್ಣಾರೆ ಕಂಡಿದ್ದು , ಘಟನೆಯ ಬಗೆಗೆ ಕೂಡಲೇ ಪೊಲೀಸರಿಗೆ ತಿಳಿಸಿದಳು. ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹೆಣಗಳಿಗಾಗಿ ತೀವ್ರ ಶೋಧ ನಡೆಸುತ್ತಿವೆ ಎಂದು ಡಿಎಸ್‌ಪಿ ಎ.ವಿ.ವಾಸವ ತಿಳಿಸಿದ್ದಾರೆ.

ಹೆಣ್ಣುಮಕ್ಕಳನ್ನು ನದಿಗೆ ತಳ್ಳಿದ ಹುಸೇನ್‌ ತಲೆ ತಪ್ಪಿಸಿಕೊಂಡಿದ್ದಾನೆ. ಪೊಲೀಸ್‌ ಠಾಣೆಗೆ ಧಾವಿಸಿ ಬಂದಿರುವ ಆಪಾದಿತನ ಹೆಂಡತಿ- ಮನೆಯಲ್ಲಿನ ಬಡತನದಿಂದ ಹತಾಶನಾದ ತನ್ನ ಗಂಡ ಈ ಕೃತ್ಯವೆಸಗಿರುವುದಾಗಿ ಹೇಳಿದ್ದಾಳೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+