ಗಂಡಂದಿರಿಂದ ಪತ್ನಿಯರ ಕೊಲೆ ; ದ.ಆಫ್ರಿಕಾ ಭಾರತೀಯರ ತತ್ತರ
ಗಂಡಂದಿರಿಂದ ಪತ್ನಿಯರ ಕೊಲೆ ; ದ.ಆಫ್ರಿಕಾ ಭಾರತೀಯರ ತತ್ತರ
ಡರ್ಬನ್‌ನ ಅನಿವಾಸಿಗಳಿಗೆ ಕೌಟುಂಬಿಕ ಸಮಸ್ಯೆಯ ಕಾಟ
ಮೊದಲ ಘಟನೆಯಲ್ಲಿ ಧೀರಜ್ ಕಿಜಾರ್ ಸಿಂಗ್(31) ತನ್ನ ಪತ್ನಿ ಇಶಾನ್ನ (28) ಎಂಬಾಕೆಯನ್ನು ಕೊಲೆಗೈದಿದ್ದರೆ, ಎರಡನೇ ಪ್ರಕರಣದಲ್ಲಿ ಶ್ರೀನಿವಾಸನ್ ಷಣ್ಮುಗಮ್ ರೆಡ್ಡಿ (46) ತನ್ನ ಪತ್ನಿ ಜಯಲಚ್ಚುಮಿ (40) ಯನ್ನು ಕೊಂದಿದ್ದಾನೆ. ಮೊದಲ ಘಟನೆಯಲ್ಲಿ ಪೊಲೀಸ್ ವೃತ್ತಿಯ್ಲಲಿರುವ ಧೀರಜ್ ಕಿಜಾರ್ ಸಿಂಗ್ ತನ್ನ ಪತ್ನಿ ಇಶಾನ್ನರಿಗೆ ಸಾಕಷ್ಟು ಕಿರುಕುಳ ನೀಡಿರುವುದಲ್ಲದೇ, ತಾಯಿ ಮನೆಯಲ್ಲಿ ಆಶ್ರಯ ಪಡೆದುದಕ್ಕಾಗಿ ಆಕೆಯ ತಮ್ಮ ಹಾಗೂ ಆಕೆಯನ್ನು ಗುಂಡಿಟ್ಟು ಕೊಲೆಗೈದಿದ್ದಾನೆ.
ಕೊಲೆ ಮಾತ್ರವಲ್ಲದೆ, ಕೊಲೆಯಷ್ಟೇ ಪ್ರಮುಖವಾದ ದಾಂಪತ್ಯದ ಆಂತರಿಕ ಸಮಸ್ಯೆಗಳು ಹಾಗೂ ಉದ್ಭವಿಸುತ್ತಿರುವ ಕೌಟುಂಬಿಕ ಭಿನ್ನಾಭಿಪ್ರಾಯಗಳು ದಕ್ಷಿಣ ಆಫ್ರಿಕಾದಲ್ಲಿನ ಅನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಈ ಸಂಬಂಧಗಳ ಬಿರುಕು ಇಷ್ಟೊಂದು ತೀವ್ರತೆಗೆ ಹೋದುದಕ್ಕೆ- ಜನತೆ ಆರ್ಥಿಕ, ಬಾಹ್ಯ... ಇತರ ಚಿಂತೆಗಷ್ಟೇ ತಮ್ಮ ಗಮನ ಕೇಂದ್ರೀಕರಿಸಿದುದರ ಫಲ ಎನ್ನಲಾಗಿದೆ. ಮಾನವೀಯ ಸಂಬಂಧಗಳ ಕುರಿತ ಮರು ಚಿಂತನೆಗೆ ಈ ಕೊಲೆ ್ಫಕಲಹಗಳು ಎಡೆ ಮಾಡಿಕೊಟ್ಟಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications