ಕಾಂಗ್ರೆಸ್ ಕ್ಯಾಬರೆ : ಮಂಡ್ಯದ ಶಿವರಾಮೇಗೌಡರಿಗೆ ಸ್ಥಾನ ನಷ್ಟ
ಕಾಂಗ್ರೆಸ್ ಕ್ಯಾಬರೆ : ಮಂಡ್ಯದ ಶಿವರಾಮೇಗೌಡರಿಗೆ ಸ್ಥಾನ ನಷ್ಟ
ನೃತ್ಯದ ಕುರಿತು ಪೂಜಾರಿಗೆ ಬೇಸರ, ಹೈಕಮಾಂಡ್‌ನಲ್ಲೂ ತಳಮಳ
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮಕ್ಷಮದಲ್ಲಿಯೇ ನಡೆದ ಕ್ಯಾಬರೆ ನೃತ್ಯ ಕೆಪಿಸಿಸಿಗೆ ನುಂಗಲಾರದ ತುತ್ತಾಗಿದ್ದು, ಶಿವರಾಮೇಗೌಡರನ್ನು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಕಿತ್ತುಹಾಕಿದ್ದಾರೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದ ಈ ಅಹಿತಕರ ಘಟನೆ ದಿಲ್ಲಿಯವರೆಗೂ ಮುಟ್ಟಿದ್ದು, ಹೈಕಮಾಂಡ್ ಆದೇಶದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಪೂಜಾರಿ ಬುಧವಾರ ಈ ಕ್ರಮ ಕೈಗೊಂಡಿದ್ದಾರೆ.
ರಾಜ್ಯದ ಉಸ್ತುವಾರಿ ವಹಿಸಿದ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಲಾಸರಾವ್ ದೇಶಮುಖ್ ಅವರು ಕೈಗೊಂಡ ಮೊದಲ ಕ್ರಮ ಇದಾಗಿದೆ. ಘಟನೆ ಬಗ್ಗೆ ಬೇಸರಗೊಂಡಿದ್ದ ಪೂಜಾರಿ ಅವರು ಎಐಸಿಸಿಗೆ ಪ್ರಕರಣದ ಬಗ್ಗೆ ವರದಿ ನೀಡಿದ್ದರು ಎನ್ನಲಾಗಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ನಾಚ್ ಮೇರೇ ಬುಲ್‌ಬುಲ್ ಕೆ ಓಟು ಮಿಲೇಗಾ.......!
ಮುಖಪುಟ / ವಾರ್ತೆಗಳು












Click it and Unblock the Notifications