ಎಲ್ಲ ಜಿಲ್ಲೆಗಳಲ್ಲಿ ಕುವೆಂಪು ಮಾದರಿ ಶಾಲೆ, ನಾಲ್ಕುನಗರಕ್ಕೆ ವಿಮಾನ
ಎಲ್ಲ ಜಿಲ್ಲೆಗಳಲ್ಲಿ ಕುವೆಂಪು ಮಾದರಿ ಶಾಲೆ, ನಾಲ್ಕುನಗರಕ್ಕೆ ವಿಮಾನ
ರಾಜ್ಯ ಬಜೆಟ್ 2004-05ರ ಮುಖ್ಯಾಂಶಗಳು, ಭಾಗ-2
- ಹಳ್ಳಿಗಾಡಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯದ 27 ಜಿಲ್ಲೆಗಳಲ್ಲಿ ಕುವೆಂಪು ಶತಮಾನೋತ್ಸವ ಕನ್ನಡ ಮಾದರಿ ಶಾಲೆಗಳ ನಿರ್ಮಾಣ.
- ರೈತರ ನೆರವಿಗಾಗಿ ಆಪ್ತ ಬಾಂಧವ ಯೋಜನೆ ಜಾರಿ. ಈ ಯೋಜನೆಯಡಿ ಮಾರ್ಚ್ 31, 2003 ಅವಧಿವರೆಗೆ ಪಂಪ್‌ಸೆಟ್‌ಗಳ ಬಾಕಿ ಮನ್ನಾ . ಸರ್ಕಾರಕ್ಕೆ ಸುಮಾರು 600 ಕೋಟಿ ರುಪಾಯಿ ಹೊರೆ.
- ಬರ ಪರಿಹಾರ ಕಾಮಗಾರಿಗಳಿಗಾಗಿ 400 ಕೋಟಿ ರುಪಾಯಿ ಖರ್ಚು ಮಾಡಲು ಸರ್ಕಾರ ಸಿದ್ಧ.
- ರೈತರಿಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲ ನೀಡಿಕೆ, ಬಡ್ಡಿ ಮನ್ನಾ - ಇತ್ಯಾದಿ ರೈತಪರ ಯೋಜನೆಗಾಗಿ 880 ಕೋಟಿ ರುಪಾಯಿಯಲ್ಲಿ ರೈತ ಪರಿಹಾರ ನಿಧಿ ವಿಸ್ತರಣೆ.
- ರೈತ ಕಾರ್ಮಿಕರು ಹಾಗೂ ರೈತರಿಗಾಗಿ ರೈತ ಸಂಜೀವಿನಿ ಹೆಸರಿನ ಅಪಘಾತ ವಿಮೆ ಸೌಲಭ್ಯ.
- ಉದ್ಯೋಗಾಸಕ್ತ ಗುಂಪುಗಳನ್ನು ಪ್ರೋತ್ಸಾಹಿಸಲು ಶ್ರಮಶಕ್ತಿ ಹೆಸರಿನ ಯೋಜನೆಯಡಿ ಧನ ಸಹಾಯ.
- ಹಿರಿಯ ನಾಗರೀಕರಿಗಾಗಿ ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗಾ ಹಾಗೂ ಬೆಳಗಾವಿಗಳಲ್ಲಿ ‘ಡೇ ಕೇರ್’ ಕೇಂದ್ರಗಳ ಆರಂಭ. ಹಾಗೂ ಆರೂ ನಗರಗಳ ನಗರಪಾಲಿಕೆಯಡಿ ಸಂಚಾರಿ ಕ್ಲಿನಿಕ್ ಮತ್ತು ಪೊಲೀಸ್ ಸಹಾಯವಾಣಿ ಸವಲತ್ತು .
- ಕೇಂದ್ರ ಸರ್ಕಾರದಿಂದ ತಾಮ್ರಪತ್ರ ಪಡೆದಿರುವ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯಲ್ಲಿ ಹೆಚ್ಚಳ.
- ಬೆಂಗಳೂರು ನಾಗರಿಕರಿಗಾಗಿ ‘ಗ್ರೇಟರ್ ಬೆಂಗಳೂರು ವಾಟರ್ ಸ್ಯಾನಿಟೇಷನ್’ ಯೋಜನೆ. ಈ ಯೋಜನೆಯಡಿ ಬೆಂಗಳೂರಿನ 1.2 ಮಿಲಿಯನ್ ಜನಸಂಖ್ಯೆಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಒದಗಿಸಲಾಗುವುದು. 31 ಕೋಟಿ ರುಪಾಯಿಯನ್ನು ಈ ಯೋಜನೆಗೆ ಮೀಸಲಿಡಲಾಗಿದೆ.
- ಮೈಸೂರು, ಹಂಪಿ, ಬಿಜಾಪುರ ಹಾಗೂ ಗುಲ್ಬರ್ಗಾಗಳಿಗೆ ಖಾಸಗಿ ಸಹಯೋಗದಲ್ಲಿ ವಿಮಾನ. ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವಾರು ಕ್ರಮ.
- ದಸರಾ ವೇಳೆಗೆ ಮೈಸೂರು ವಿಮಾನ ನಿಲ್ದಾಣ ಆರಂಭ.
- ಕಡಲು ಕೊರೆತ ತಡೆಗೆ 10 ಕೋಟಿ ರುಪಾಯಿ ಮೀಸಲು.
- ರಾಜ್ಯದ ಯೋಜನಾಗಾತ್ರ ಶೇ.8.14ರಷ್ಟು - 10,083.51 ಕೋಟಿ ರು.ಗಳಿಂದ 10,904.23 ಕೋಟಿ ರು.ಗೆ ಹೆಚ್ಚಳ.
- 2004-05ನೇ ಸಾಲಿನಲ್ಲಿ ಯಾವುದೇ ಹೊಸ ಲೆವಿ ತೆರಿಗೆಗಳಿಲ್ಲ .
- ಮಹಿಳಾ ಕಲ್ಯಾಣಕ್ಕಾಗಿ ಇಂದಿರಾ ಜ್ಯೋತಿ ಕಾರ್ಯಕ್ರಮ. ಮುಂದಿನ ಮೂರು ವರ್ಷಗಳಲ್ಲಿ ಶೇ.100ರ ಸಬ್ಸಿಡಿಯಾಂದಿಗೆ ಇಂದಿರಾಜ್ಯೋತಿ ಯೋಜನೆಯಡಿ ಒಂಟಿ ಬರ್ನರ್ ಸ್ಟವ್ ಹಾಗೂ ಅಡುಗೆ ಅನಿಲ ಸಿಲಿಂಡರ್ ನೀಡಲಾಗುವುದು. ಈ ಸವಲತ್ತು ಸ್ತ್ರೀಶಕ್ತಿ ಸಮೂಹಕ್ಕೆ ಸೇರಿದ 15 ಲಕ್ಷ ಕುಟುಂಬಗಳಿಗೆ ದೊರೆಯುವುದು.
Post your views
ಬಜೆಟ್ ಮುಖ್ಯಾಂಶಗಳು, ಭಾಗ-1
ತೆರಿಗೆ ರಹಿತ ಮಾಯಾಬಜಾರು ! ಚುನಾವಣೆ ಸಮಯದ ಕೃಷ್ಣಗಾರುಡಿ
ಮುಖಪುಟ / ಕೃಷ್ಣಗಾರುಡಿ












Click it and Unblock the Notifications