ತೆಹಲ್ಕಾದಿಂದ ಜಾರ್ಜ್, ಬೋಫೋರ್ಸ್‌ನಿಂದ ರಾಜೀವ್ ಪಾರು
ತೆಹಲ್ಕಾದಿಂದ ಜಾರ್ಜ್, ಬೋಫೋರ್ಸ್‌ನಿಂದ ರಾಜೀವ್ ಪಾರು
ಹಿಂದುಜಾ ಸಹೋದರರ ಮೇಲೆ ಮೋಸ ಹಾಗೂ ಪಿತೂರಿ ಆರೋಪ
ಫೂಕಾನ್ ಆಯೋಗ ತನ್ನ ವರದಿಯ ಮೊದಲ ಆಧ್ಯಾಯವನ್ನು ಪ್ರಧಾನಿಗೆ ಇಂದು(ಫೆ.04) ಬೆಳಿಗ್ಗೆ 10.30 ಕ್ಕೆ ಸಲ್ಲಿಸಿತು. ಮೊದಲ ಅಧ್ಯಾಯದಲ್ಲಿ ರಕ್ಷಣಾ ಇಲಾಖೆಯ 12 ವ್ಯವಹಾರದ ಚಾಲ್ತಿಯ ಉಲ್ಲೇಖವಿದೆ. ತೀರ್ಪಿನಲ್ಲಿ ಈ ವ್ಯವಹಾರಗಳು ಕಾನೂನು ಬದ್ಧವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಜಾರ್ಜ್ ಸಹಿತ ಎನ್‌ಡಿಎ ಮಿತ್ರಕೂಟವು ಫೂಕಾನ್ ಆಯೋಗದ ವರದಿಯನ್ನು ಸ್ವಾಗತಿಸಿದರೆ, ಕಾಂಗ್ರೆಸ್ ಆಯೋಗದ ಗುಣಮಟ್ಟವನ್ನೇ ಪ್ರಶ್ನಿಸಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಹೊರಬಿದ್ದಿರುವ ಈ ತೀರ್ಪು ಭಾರೀ ಮಹತ್ವ ಗಳಿಸಿದೆ.
ರಾಜೀವ್ ಆರೋಪ ಮುಕ್ತ : ರಕ್ಷಣಾ ಇಲಾಖೆಗೆ ಸಂಬಂಧಿಸಿದ ಬೋಪೊರ್ಸ್ ಹಗರಣದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ನಿರ್ದೋಷಿ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಹಿಂದುಜಾ ಸಹೋದರರ ಮೇಲೆ ವಿಚಾರಣಾ ವಿಶೇಷ ನ್ಯಾಯಪೀಠ ಹೊರಿಸಿದ್ದ ಮೋಸ ಹಾಗೂ ಪಿತೂರಿಯ ಅಪರಾಧವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ. 1986ರಲ್ಲಿ , ಭಾರತೀಯ ರಕ್ಷಣಾ ಇಲಾಖೆಗೆ ಶಸ್ತ್ರಾಸ್ರ ಖರೀದಿಯ ಒಪ್ಪಂದದ ಸುಮಾರು 65 ಕೋಟಿಯ ಅವ್ಯವಹಾರದ ಈ ವಿಚಾರಣೆಯನ್ನು ನ್ಯಾಯಮೂರ್ತಿ ಜೆ.ಡಿ.ಕಪೂರ್ ನಡೆಸುತ್ತಿದ್ದಾರೆ.
1999ರಲ್ಲಿ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಆಗಿನ ರಕ್ಷಣಾ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್, ಬೋಪೊರ್ಸ್ ಏಜೆಂಟ್ ಡಬ್ಲ್ಯು.ಎನ್. ಛಡ್ಡಾ, ಇಟಲಿಯ ವ್ಯಾಪಾರಿ ಕ್ವಾಟ್ರೋಚ್ಚಿ ಮತ್ತು ಬೋಪೊರ್ಸ್ ಕಂಪೆನಿ ಮಾಲಿಕ ಮಾರ್ಟಿನ್ ಆಡ್ಬೊರವರ ಹೆಸರು ನಮೂದಿಸಲಾಗಿತ್ತು. ಅದರ ಒಂದು ವರ್ಷದ ಬಳಿಕ ಹಿಂದುಜಾ ಸಹೋದರರು 14ಕೋಟಿ ರೂಪಾಯಿ ತೆಗೆದು ಕೊಂಡು ದಲ್ಲಾಳಿಯಾಗಿ ವರ್ತಿಸಿದ್ದಾರೆಂದು ಆರೋಪಿಸಿ ಅವರ ಹೆಸರು ಸೇರ್ಪಡೆಗೊಳಿಸಲಾಗಿತ್ತು. ಇವರಲ್ಲಿ ರಕ್ಷಣಾ ಕಾರ್ಯದರ್ಶಿ ಎಸ್‌ಕೆ ಭಟ್ನಾಗರ್, ಬೋಪೊರ್ಸ್ ಏಜೆಂಟ್ ಡಬ್ಲು ಎನ್ ಛಡ್ಡಾ ಮೃತಪಟ್ಟಿದ್ದರೆ ,ಇಟಲಿಯ ವ್ಯಾಪಾರಿ ಕ್ವಾಟ್ರೋಚ್ಚಿ ಮತ್ತು ಬೋಪೊರ್ಸ್ ಕಂಪೆನಿ ಮಾಲಿಕ ಮಾರ್ಟಿನ್ ಆಡ್ಬೊರನ್ನು ವಿಚಾರಣೆಗೆ ಒಳಪಡಿಸುವಲ್ಲಿ ವಿಫಲವಾಗಿತ್ತು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications