ಬಡತನ ನಾಶ ಯಜ್ಞಕ್ಕೆ ಐಟಿ ಕ್ಷೇತ್ರದ ಪಾಲು ಕಡಿಮೆ -ನೀಲೇಕಣಿ
ಬಡತನ ನಾಶ ಯಜ್ಞಕ್ಕೆ ಐಟಿ ಕ್ಷೇತ್ರದ ಪಾಲು ಕಡಿಮೆ -ನೀಲೇಕಣಿ
ಬಿಎಟಿಎಫ್ ಕಾರ್ಯ ವೈಖರಿಗೆ ವಿಶ್ವಬ್ಯಾಂಕ್ ಅಧಿಕಾರಿ ಶ್ಲಾಘನೆ
ಬೆಂಗಳೂರಿನಲ್ಲಿ ಬಡತನವನ್ನು ನಿರ್ಮೂಲಗೊಳಿಸುವಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ್ದು ಅಗ್ರಪಾಲೇನೂ ಇಲ್ಲ . ಆದರೆ ಬಡತನವನ್ನು ತೊಡೆದುಹಾಕುವ ಕಾರ್ಯಕ್ರಮಗಳಲ್ಲಿ ಐಟಿಯನ್ನು ಪ್ರಮುಖವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ನಂದನ್ ನೀಲೇಕಣಿ ಹೇಳಿದರು. ವಿಶವಬ್ಯಾಂಕ್‌ನ ಬೆಂಗಳೂರು ಕಮ್ಮಟ (ಫೆ.2, ಸೋಮವಾರ)ದಲ್ಲಿ ದಿ ಐಟಿ ಸ್ಟೋರಿ ಎನ್ನುವ ವಿಷಯದ ಕುರಿತು ನೀಲೇಕಣಿ ಮಾತನಾಡುತ್ತಿದ್ದರು.
ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿಗೆ ಐಟಿ ಕ್ಷೇತ್ರ ಉದ್ಯೋಗ ಒದಗಿಸಿಕೊಟ್ಟಿದೆ. ಇತರ 1 ಲಕ್ಷಕ್ಕೂ ಹೆಚ್ಚು ಮಂದಿಗೆ ಹೆಚ್ಚುವರಿ ಸೇವೆಗಳ ಮೂಲಕ ಪರೋಕ್ಷ ಉದ್ಯೋಗ ಒದಗಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಬಡತನವನ್ನು ತೊಡೆದುಹಾಕುವ ಆಂದೋಲನ ಹಮ್ಮಿಕೊಳ್ಳಬಹುದು ಎಂದು ನೀಲೇಕಣಿ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಸೋಮವಾರ ಆರಂಭವಾದ ವಿಶ್ವಬ್ಯಾಂಕ್‌ನ ನಾಲ್ಕು ದಿನಗಳ ಕಮ್ಮಟದಲ್ಲಿ ಶ್ರೀಲಂಕಾ, ಘಾನಾ, ಪೆರು, ಇಂಡೋನೇಷ್ಯಾ, ಜಪಾನ್, ರಷ್ಯಾ ಮುಂತಾದ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ರೈತರ ಭೂದಾಖಲೆಗಳನ್ನು ಕಂಪ್ಯೂಟರೀಕರಿಸಿರುವ ರಾಜ್ಯ ಸರ್ಕಾರದ ಮಹತ್ವಾಂಕಾಕ್ಷೆಯ ಭೂಮಿ ಯೋಜನೆಯ ಕುರಿತು ಈ ಪ್ರತಿನಿಧಿಗಳು ಮಾಹಿತಿ ಪಡೆಯಲಿದ್ದಾರೆ.
ಬೆಂಗಳೂರು ಕಾರ್ಯಪಡೆಗೆ ಪ್ರಮಾಣಪತ್ರ
ಬೆಂಗಳೂರು ಮಹಾನಗರದ ಅಭಿವೃದ್ಧಿಯಲ್ಲಿ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಬೆಂಗಳೂರು ಕಾರ್ಯಪಡೆ (ಬಿಎಟಿಎಫ್) ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಬಡತನ ನಿರ್ಮೂಲನೆ ಬಳಗದ ವಿಶ್ವಬ್ಯಾಂಕ್ ಹಿರಿಯ ಸಲಹೆಗಾರ ದೀಪಾ ನಾರಾಯಣ್ ಶ್ಲಾಘಿಸಿದರು.
ದೆಹಲಿ, ಮುಂಬಯಿ ಮುಂತಾದ ಮೆಟ್ರೋಗಳಲ್ಲೂ ಬಿಟಟಿಎಫ್ ಮಾದರಿಯಲ್ಲಿ ಕಾರ್ಯಪಡೆಗಳು ಅಸ್ತಿತ್ವಕ್ಕೆ ಬರಬೇಕಾಗಿದೆ. ಬಿಎಟಿಎಫ್ ಬೆಂಗಳೂರಿನ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಮೈಲುಗಲ್ಲುಗಳನ್ನು ನೆಡುವುದು ಮಾತ್ರವಲ್ಲ , ಪ್ರತಿ ಆರು ತಿಂಗಳಿಗೊಮ್ಮೆ ಆತ್ಮಾವಲೋಕನವನ್ನೂ ಮಾಡಿಕೊಳ್ಳುವ ಸತ್ಸಂಪ್ರದಾಯ ಇಲ್ಲಿದೆ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೀಪಾ ನಾರಾಯಣ್ ಹೇಳಿದರು.
(ಪಿಟಿಐ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications