ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ವಿರುದ್ಧದ 227 ಪ್ರಕರಣ ಕೈಬಿಡಲು ಸರ್ಕಾರದ ನಿರ್ಧಾರ

By Staff
|
Google Oneindia Kannada News

ರೈತರ ವಿರುದ್ಧದ 227 ಪ್ರಕರಣ ಕೈಬಿಡಲು ಸರ್ಕಾರದ ನಿರ್ಧಾರ
ಕಾವೇರಿ, ನೀರಾ ಚಳವಳಿಯಲ್ಲಿ ದಾಖಲಿಸಿದ್ದ ಪ್ರಕರಣಗಳ ವಜಾ

ಬೆಂಗಳೂರು : ಕಾವೇರಿ ನೀರು ಹಂಚಿಕೆ ಸಮಸ್ಯೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ರಾಜ್ಯದ ರೈತರ ಮೇಲೆ ದಾಖಲಿಸಲಾಗಿದ್ದ 227 ಪ್ರಕರಣಗಳನ್ನು ಕೈಬಿಡಲು ರಾಜ್ಯಸರ್ಕಾರ ನಿರ್ಧರಿಸಿದೆ.

2001-2002 ಮತ್ತು 2002-2003 ಇಸವಿಯಲ್ಲಿ ರಾಜ್ಯದ ರೈತರ ಮೇಲೆ ದಾಖಲಾಗಿದ್ದ 64 ಕೇಸುಗಳನ್ನು ಕೈಬಿಡಲು ಕಳೆದ ವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿತು. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿರುದ್ಧ ಚಳವಳಿಯ ಸಂದರ್ಭದಲ್ಲಿ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರೈತರ ವಿರುದ್ಧ ದಾಖಲಿಸಲಾಗಿದ್ದ 105 ಪ್ರಕರಣಗಳನ್ನೂ ಕೈಬಿಡಲಾಗಿದೆ ಎಂದು ವಾರ್ತಾ ಸಚಿವ ಡಾ. ಜಿ. ಪರಮೇಶ್ವರ್‌ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ತೆಂಗಿನ ಮರದಿಂದ ‘ನೀರಾ’ ತೆಗೆಯುವುದರ ವಿಷಯವಾಗಿ ರೈತರ ವಿರುದ್ಧ 58 ಕೇಸುಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನೂ ಕೈಬಿಡಲಾಗಿದೆ ಎಂದರು.

ಸಚಿವ ಸಂಪುಟವು ಹೇಮಾವತಿ ನದಿ ಕಾಲುವೆಯಿಂದ ಮಧುಗಿರಿಗೆ ನೀರಿನ ಸರಬರಾಜು ಯೋಜನೆಗೆಂದು 17.94 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಅಲ್ಲದೆ ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆಗೆ, ಮಹಾತ್ಮಾ ಗಾಂಧಿ ಮಾರ್ಕೆಟ್‌ ನವೀಕರಣಕ್ಕಾಗಿ ರೂ. 18 ಕೋಟಿ ಸಾಲವನ್ನು ಮಂಜೂರು ಮಾಡಿದೆ ಎಂದು ಸಚಿವ ಪರಮೇಶ್ವರ್‌ ಸುದ್ದಿಗಾರರಿಗೆ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X