ಲಘುಪಾನೀಯ ಕಂಪನಿ-ಕೈಗಾರಿಕೆಗಳ ಬಳಕೆಯ ನೀರಿಗೆ ಕರಭಾರ?

ಲಘುಪಾನೀಯ ಕಂಪನಿ-ಕೈಗಾರಿಕೆಗಳ ಬಳಕೆಯ ನೀರಿಗೆ ಕರಭಾರ?
‘ಮಾಲಿನ್ಯ ನಿರ್ವಹಣೆ ಮತ್ತು ಸಂರಕ್ಷಣೆ’ ಕಾಯಿದೆಯಡಿಯಲ್ಲಿ ತೆರಿಗೆ ಹೇರಿಕೆ

ನವದೆಹಲಿ : ಲಘು ಪಾನೀಯ ಕಂಪೆನಿಗಳು ಮತ್ತು ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಕಂಪೆನಿಗಳು ಬಳಸುತ್ತಿರುವ ಅಂತರ್ಜಲವನ್ನು ತೆರಿಗೆ ವ್ಯಾಪ್ತಿಯಾಳಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದೆ.

ಪ್ರಸ್ತುತ ಲಘು ಪಾನೀಯ ಕಂಪೆನಿಗಳು ಮತ್ತು ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ನೀರನ್ನು ಬಳಸುತ್ತಿರುವ ಕಂಪೆನಿಗಳು ನೀಡುತ್ತಿರುವ ವಾಟರ್‌ ಸೆಸ್‌ ತೀರಾ ಅಲ್ಪ ಮೊತ್ತವಾಗಿದೆ. ಅದು ‘ಮಾಲಿನ್ಯ ನಿರ್ವಹಣೆ ಮತ್ತು ಸಂರಕ್ಷಣೆ’ ಕಾಯಿದೆಯಡಿಯಲ್ಲಿ ರಾಜ್ಯ ಮಾಲಿನ್ಯ ನಿರ್ವಹಣಾ ಸಂಸ್ಥೆ ಗೆ ಪಾವತಿ ಮಾಡುವ ತೆರಿಗೆಯಾಗಿದೆ.

ಲಘು ಪಾನೀಯದಲ್ಲಿ ಕೀಟನಾಶಕ ಕುರಿತು ತನಿಖೆ ನಡೆಸಿದ ಜಂಟಿ ಸಂಸದೀಯ ಸದನ ಸಮಿತಿಯ ಮುಂದೆ ತನ್ನ ವರದಿ ಮಂಡಿಸುವಾಗ ಅರಣ್ಯ ಹಾಗೂ ಪರಿಸರ ಸಚಿವಾಲಯವು ‘ಇನ್ನು ಮುಂದಿನ ದಿನಗಳಲ್ಲಿ ನೀರನ್ನು ಕೈಗಾರಿಕಾ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದಲ್ಲಿ ತೆರಿಗೆ ವಿಧಿಸಬೇಕಾಗುತ್ತದೆ ’ಎಂದು ಹೇಳಿತ್ತು.

ತನಿಖೆಯ ಬಳಿಕ ಈ ಜಂಟಿ ಸಂಸದೀಯ ಸದನ ಸಮಿತಿಯು ತನ್ನ ವರದಿಯಲ್ಲಿ ನೀರಿನ ಬಳಕೆಯ ಕುರಿತು ಸರಕಾರ ಹಾಗೂ ಖಾಸಗಿ ಕಂಪೆನಿಗಳು ತೋರುತ್ತಿರುವ ದಿವ್ಯ ನಿರ್ಲಕ್ಷ್ಯದ ವಿರುದ್ಧ ಹರಿ ಹಾಯ್ದಿತ್ತು. ಜಲ ಸಂಪನ್ನೂಲ ಇಲಾಖೆಯ ಹೊಣೆಗೇಡಿತನವನ್ನು ಕಟುವಾಗಿ ಟೀಕಿಸಿ, ನೀರಿನ ಬಳಕೆಯ ನಿಯಂತ್ರಣ ಮಾಡುವಂತೆ ಮತ್ತು ತೆರಿಗೆ ವಿಧಿಸುವಂತೆ ತಿಳಿಸಿತ್ತು. ‘ಜಲ ಸಂಪನ್ನೂಲ ಇಲಾಖೆಯು ತೀವ್ರ ನಿಗಾ ವಹಿಸಬೇಕಾಗಿದೆ. ರಾಜ್ಯಗಳಿಗೆ ಈ ಕುರಿತು ನಿರ್ದೇಶಿಸ ಬೇಕು ಹಾಗೂ ವಾಣಿಜ್ಯ ನೀರಿನ ಬಳಕೆಗೆ ತೆರಿಗೆ ವಿಧಿಸುವಂತೆ ’ ಸೂಚಿಸಿತ್ತು.

ಈ ಹಿಂದೆ ದೆಹಲಿಯಲ್ಲಿ ವಿಶ್ವ ಸಮತಾ ವೇದಿಕೆ ಜಲ ಸಂರಕ್ಷಣಾ ಸಮಾವೇಶ ಕೈಗೊಂಡಿತ್ತು. ಅಲ್ಲಿ ಫ್ರೆಂಚ್‌ ರೈತ ನಾಯಕ ಜೋಸೆ ಬೋವೆ, ಕೆನಡಾದ ಪರಿಸರವಾದಿ ಮೌಡ್‌ಬರ್ಲೊ , ಅಮೇರಿಕಾ ಪರಿಸರ ಹೋರಾಟಗಾರ ವಾರ್ಡ್‌ ಮೋರ್‌ಹೌಸ್‌ ಮುಂತಾದವರು ಅಂತರಾಷ್ಟ್ರೀಯ ಕಂಪೆನಿಗಳ ನೀರಿನ ದುರ್ಬಳಕೆ ವಿರುದ್ಧ ಹೋರಾಡಲು ಕರೆ ನೀಡಿದ್ದರು. ಇದೇ ಸಮಾವೇಶದಲ್ಲಿ ಜನಪರ ಹೋರಾಟಗಾರ್ತಿ ವಂದನಾ ಶಿವ- ನಾವು ಹೈಡ್ರೊಪೈರೆಸಿಯನ್ನು ತಡೆಹಿಡಿಯಬೇಕಾಗಿದೆ ಎಂದು ಎಚ್ಚರಿಸಿದ್ದರು . ಪ್ಲಾಚಿಮಾಡದಲ್ಲಿ ಕೋಕ್‌ ಕಾರ್ಖಾನೆ ಮಾಡುತ್ತಿರುವ ‘ನೀರು ಕಳ್ಳತನದ’ ವಿರುದ್ಧ ಚಳುವಳಿ ಹಮ್ಮಿಕೊಂಡಿರುವುದಾಗಿ ಹೇಳಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+