‘ಓ ದಲಿತರೇ, ಮಠವನೆಂದು ಕಟ್ಟದಿರಿ, ಸ್ವಾಮಿಗಳೆಂದೂ ಆಗದಿರಿ..’

‘ಓ ದಲಿತರೇ, ಮಠವನೆಂದು ಕಟ್ಟದಿರಿ, ಸ್ವಾಮಿಗಳೆಂದೂ ಆಗದಿರಿ..’
ಮಠಾಧಿಪತಿಗಳು ಹಾಗೂ ಮೂಲಭೂತವ್ಯಾಧಿಗಳ ಬಗ್ಗೆ ಕಿಡಿ ಕಾರಿದ ಬಸವರಾಜು

ಮೈಸೂರು : ಅಸ್ಪೃಶ್ಯತೆಯ ಕೇಂದ್ರಗಳಾದ ಮಠಗಳಿಂದ ದಲಿತರು ದೂರವಿರಬೇಕೆಂದು ಪಂಪ ಪ್ರಶಸ್ತಿ ವಿಜೇತ ಲೇಖಕ ಡಾ.ಎಲ್‌.ಬಸವರಾಜು ಕರೆ ನೀಡಿದ್ದಾರೆ.

ಮಠಗಳು ಅಸ್ಪೃಶ್ಯತೆಯನ್ನು ಆಚರಿಸುತ್ತಿವೆ. ಆ ಕಾರಣದಿಂದಾಗಿ ಮಠಗಳಿಗೆ ಹೋಗಬೇಡಿ. ಮಠಗಳನ್ನು ಕಟ್ಟಬೇಡಿ. ಸ್ವಾಮಿಗಳಾಗಲೂಬೇಡಿ ಎಂದು ಲೇಖಕ ಎಲ್‌.ಬಸವರಾಜು ಭಾನುವಾರ ಹೇಳಿದರು. ಸಂವಾದ ಮಾಸ ಪತ್ರಿಕೆಯ ಓದುಗರ ಬಳಗ ಹಾಗೂ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

40 ಕೋಟಿಗೂ ಹೆಚ್ಚು ಮಂದಿ ಹಸಿವು, ಬಡತನ, ಅನಕ್ಷರತೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಮಸೀದಿ ಉರುಳಿಸಿ ಅನಗತ್ಯ ಸಮಸ್ಯೆಯಾಂದನ್ನು ಸೃಷ್ಟಿಸಲಾಗುತ್ತದೆ. ರಾಜ್ಯದಲ್ಲಿ ದತ್ತಕೇಂದ್ರದ ವಿವಾದ ಸೃಷ್ಟಿಸಲಾಗುತ್ತದೆ. ಮತೀಯವಾದಿಗಳ ಉಪಾಯ ಅರಿಯದ ನಾವು ಅಳತೆಮೀರಿ ಪ್ರತಿಕ್ರಿಯಿಸುತ್ತೇವೆ. ಇದರಿಂದ ಸಂಘರ್ಷ ಸಾಧ್ಯವುಗುವುದೇ ವಿನಃ ಸಂವಾದ ಸಾಧ್ಯವಾಗುವುದಿಲ್ಲ ಎಂದು ಬಸವರಾಜು ಹೇಳಿದರು.

ನಮ್ಮನ್ನು ಬೇರೆ ಯಾರೋ ಬಂದು ಉದ್ಧಾರ ಮಾಡುವುದಿಲ್ಲ . ನಮ್ಮ ಏಳಿಗೆ ನಮ್ಮ ಕೈಯಲ್ಲೇ ಇದೆ. ಪರಸ್ಪರ ಹೋರಾಡುವ ಜನರನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಅವರು ಕಿವಿಮಾತು ಹೇಳಿದರು.

21ನೇ ಶತಮಾನವನ್ನು ಭಯೋತ್ಪಾದಕರ ಯುಗ ಎಂದು ಬಣ್ಣಿಸಿದ ಬಸವರಾಜು- ಆಟಂಬಾಂಬ್‌, ಬಂದೂಕಿನಿಂದ ಸಮಸ್ಯೆ ಬಗೆಹರಿಯುವುದಿಲ್ಲ . ಮೂಲಭೂತವಾದಿಗಳು ಪ್ರಗತಿಪರರ ಬೆಳವಣಿಗೆಯನ್ನು ಪಲ್ಲಟಗೊಳಸಲು ಮುಂದಾಗಿದ್ದಾರೆ. ಈ ಮೂಲಭೂತವ್ಯಾಧಿಗಳ ಕುರಿತು ಜನತೆ ಎಚ್ಚರದಿಂದಿರಬೇಕು ಎಂದು ಎಚ್ಚರಿಸಿದರು.

ಸಾಹಿತಿ ಪ್ರೊ.ದೇ.ಜವರೇಗೌಡ, ಸಂವಾದ ಪತ್ರಿಕೆಯ ಸಂಪಾದಕ ಇಂದೂಧರ ಹೊನ್ನಾಪುರ, ಅಗ್ನಿ ಪತ್ರಿಕೆ ಸಂಪಾದಕ ಶ್ರೀಧರ್‌ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+