ಉದಯವಾಗುತ್ತಿಹುದು ಚೆಲುವ ಕನ್ನಡ ನಾಡು ನೋಡು ಬಾರಾ ..
ಉದಯವಾಗುತ್ತಿಹುದು ಚೆಲುವ ಕನ್ನಡ ನಾಡು ನೋಡು ಬಾರಾ ..
ರಾಜ್ಯದಲ್ಲಿ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ ಮತ್ತು ಸಮಾವೇಶ ಭವನ
ರಾಜ್ಯದಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ಸರ್ಕಾರದ್ದು ಬರಿ ಬಾಯಿ ಮಾತಲ್ಲ ; ಸಾಕಷ್ಟು ಕೆಲಸಗಳು ನಡೆದಿವೆ. ನಡೆಯಬೇಕಾದ ಕೆಲಸಗಳೂ ಸಾಕಷ್ಟಿವೆ. ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ ಮತ್ತು ಸಮಾವೇಶ ಭವನ ಕರ್ನಾಟಕದಲ್ಲಿ ರೂಪುಗೊಳ್ಳಲಿವೆ. ಈ ಕುರಿತು ಈಗಾಗಲೇ ಸಿದ್ಧತೆ ನಡೆದಿದೆ ಎನ್ನುತ್ತಾರೆ ರಾಜ್ಯ ಸರಕಾರ ಪ್ರವಾಸೋದ್ಯಮ ಖಾತೆ ಸಚಿವ ಜೆ. ಅಲೆಗ್ಸಾಂಡರ್.
ವಾರ್ಷಿಕ ಕನೆಕ್ಟ್ ಸಾರ್ವಜನಿಕ-ಖಾಸಗಿ ಸಮ್ಮೇಳನದ ಸಂದರ್ಭದಲ್ಲಿ ಸಚಿವ ಅಲೆಗ್ಸಾಂಡರ್ ಹೇಳಿದ ಪ್ರಕಾರ :
1.ಪ್ರಸಕ್ತ ವಿತ್ತ ವರ್ಷದ ಮೂರನೇ ಬಾರಿ ನಡೆಯುತ್ತಿರುವ ಕನೆಕ್ಟ್ ಸಾರ್ವಜನಿಕ-ಖಾಸಗಿ ಸಮ್ಮೇಳನವು ಮೆಗಾ ಯೋಜನೆಗಳತ್ತ ದೃಷ್ಟಿ ಹಾಯಿಸಲಿದೆ. ಅದರ ಜೊತೆ ಮೂಲೆಗುಂಪಾಗಿರುವ ಕೆಲವು ಯಾತ್ರಿತಾಣಗಳ ಅಭಿವೃದ್ಧಿ ಕುರಿತು ಚರ್ಚಿಸಲಿದೆ. ಇದು ರಾಜ್ಯದ ಪ್ರವಾಸೋದ್ಯಮ ಮಾತ್ರವಲ್ಲದೆ ಕರ್ನಾಟಕದ ಆರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಈಡಠk ಯೋಜನೆಗಳನ್ನು ಖಾಸಗಿ ಕಂಪೆನಿಗಳು ಸರಕಾರಿ ಸಂಸ್ಥೆಗಳ ಜೊತೆಗೂಡಿ ನಿರ್ಮಿಸಲಿವೆ.
2.ಕರ್ನಾಟಕದಲ್ಲಿ ಸಾಕಷ್ಟು ಐತಿಹಾಸಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳಿವೆ. ನಾವೀಗ ಅವುಗಳನ್ನು ಯಾವ ರೀತಿ ಪರಿಣಾಮಕಾರಿಯಾಗಿ ವಾಣಿಜ್ಯೋದ್ದೇಶಗಳಿಗಾಗಿ ಬಳಸಿಕೊಳ್ಳಬೇಕು ಹಾಗೂ ಪ್ರಚುರ ಪಡಿಸಬೇಕು ಎಂಬುದರ ಕುರಿತು ಚರ್ಚಿಸಬೇಕಾಗಿದೆ. ಮುಂದಿನ 5 ರಿಂದ 10 ವರ್ಷಗಳಲ್ಲಿ ಪ್ರವಾಸೋದ್ಯಮದಿಂದ ರಾಜ್ಯದ ಆದಾಯ, ತೆರಿಗೆ ,ಉದ್ಯೋಗ ಹಾಗೂ ಮತ್ತಿತರ ಕ್ಷೇತ್ರಗಳನ್ನು ಬಲಪಡಿಸವ ಕುರಿತು ಚರ್ಚಿಸಲಾಗುವುದು .
3.ರಾಜ್ಯದಲ್ಲಿನ ಪ್ರವಾಸಿಕ್ಷೇತ್ರಗಳಲ್ಲಿನ ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಒಟ್ಟಿನಲ್ಲಿದು ಪ್ರವಾಸದ ಸಮಯ. ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ರಾಜ್ಯ ಸರ್ಕಾರದ ಕೆಲವು ಚಿಂತನೆಗಳು ಹೀಗಿವೆ :
ಉದಯವಾಗುತ್ತಿದೆ ಚೆಲುವ ಕನ್ನಡ ನಾಡು ; ಏನಂತೀರಿ ?
ಮುಖಪುಟ / ವಾರ್ತೆಗಳು












Click it and Unblock the Notifications