ರೈಲ್ವೆ ಬಜೆಟ್ : ಪ್ರಯಾಣ ದರ ಸ್ಥಿರ, ಬೆಂಗಳೂರಿಗೆ ಹೊಸ ರೈಲು..
ರೈಲ್ವೆ ಬಜೆಟ್ : ಪ್ರಯಾಣ ದರ ಸ್ಥಿರ, ಬೆಂಗಳೂರಿಗೆ ಹೊಸ ರೈಲು..
ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಹೆಸರಿನಲ್ಲಿ 18 ಹೊಸ ಟ್ರೆೃನ್, ಮೊಬೈಲ್ ಮುಲಕ ಟಿಕೆಟ್ ಬುಕ್ಕಿಂಗ್.
ರಾಜಧಾನಿ ದೆಹಲಿಯಾಂದಿಗೆ ವಿವಿಧ ರಾಜ್ಯಗಳನ್ನು ಬೆಸೆಯುವ 18 ಹೊಸ ರೈಲುಗಳ ಸಂಚಾರವನ್ನು ಪ್ರಸಕ್ತ ಸಾಲಿನಿಂದ ಪ್ರಾರಂಭಿಸಲಾಗುವುದು. ಒಟ್ಟು 43 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ 230 ಯೋಜನೆಗಳನ್ನು ಹೊಂದಲಾಗಿದೆ. ಇದರಲ್ಲಿ 20 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ದೇಶದ ಹಿಂದುಳಿದ ಮತ್ತು ದುರ್ಗಮ ಪ್ರದೇಶಗಳನ್ನು ಸಂಪರ್ಕಿಸಲಾಗುವುದು ಎಂದು ಶುಕ್ರವಾರ ಮಂಡಿಸಿದ ಮಧ್ಯಂತರ ರೈಲ್ವೆ ಬಜೆಟ್‌ನಲ್ಲಿ ಸಚಿವ ನಿತೀಶ್ ಕುಮಾರ್ ತಿಳಿಸಿದರು.
ಎನ್‌ಡಿಎ ಸರ್ಕಾರದ ಸಂಪರ್ಕ ಕ್ರಾಂತಿ ಯೋಜನೆಯ ಅನ್ವಯ ಬೆಂಗಳೂರಿನಿಂದ ದೆಹಲಿಗೆ ರೈಲೊಂದನ್ನು ಓಡಿಸಲಾಗುವುದು. ಫೆಬ್ರವರಿ 8ರಿಂದ ಈ ರೈಲು ಸಂಚಾರ ಆರಂಭವಾಗಲಿದೆ. ಆರಂಭದಲ್ಲಿ ಮೂರು ವಾರಕ್ಕೊಮ್ಮೆ ಸಂಚರಿಸುವ ಈ ರೈಲು ಅಕ್ಟೋಬರ್ 2ರಿಂದ ದೈನಿಕ ಸಂಚಾರ ಆರಂಭಿಸಲಿದೆ ಎಂದು ನಿತೀಶ್‌ಕುಮಾರ್ ಹೇಳಿದರು.
ರೈಲ್ವೆ ಬಜೆಟ್‌ನ ಮುಖ್ಯಾಂಶಗಳು :
- ಮುಂದಿನ ವರ್ಷದಲ್ಲಿ 13,425 ಕೋಟಿ ರುಪಾಯಿಗಳ ಯೋಜನಾಗಾತ್ರ ನಿಗದಿ.
- ರೈಲ್ವೆಯ ಯೋಜನೆಗಳಿಗೆ- ಬಜೆಟ್‌ನಿಂದ 4544 ಕೋಟಿ ರುಪಾಯಿ, ರೈಲ್ವೆ ವಿಶೇಷ ಸುರಕ್ಷತಾ ನಿಧಿಯಿಂದ 2795 ಕೋಟಿ ರುಪಾಯಿ, ಕೇಂದ್ರ ರಸ್ತೆ ನಿಧಿಯಿಂದ 401 ಕೋಟಿ ರುಪಾಯಿ, ಆಂತರಿಕ ಮೂಲಗಳಿಂದ 2635 ಕೋಟಿ ರುಪಾಯಿ, ಮಾರುಕಟ್ಟೆಯಿಂದ 3050 ಕೋಟಿ ರುಪಾಯಿ ಹಾಗೂ ರೈಲ್ವೆ ವಿಕಾಸ ನಿಗಮ ಲಿ.ನಿಂದ 717 ಕೋಟಿ ರುಪಾಯಿಗಳನ್ನು ಭರಿಸಲಾಗುವುದು.
- ಪ್ರಸಕ್ತ ರೈಲ್ವೆ ಬಜೆಟ್‌ನಲ್ಲಿ 18 ಹೊಸ ಟ್ರೆೃನ್‌ಗಳನ್ನು ಪರಿಚಯಿಸಲಾಗುತ್ತಿದೆ. ಈ ತಡೆರಹಿತ ರೈಲುಗಳನ್ನು ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಗಿದೆ.
- ದೆಹಲಿಯಿಂದ- ಗುವಾಹತಿ, ಸಿಂಕದರಾಬಾದ್, ದುರ್ಗ್, ಅಹಮದಾಬಾದ್, ರಾಂಚಿ, ಮುಂಬಯಿ, ತಿರುವನಂತಪುರಂ, ಡಬಲ್‌ಪುರ, ಭುವನೇಶ್ವರ, ಜೋಧ್‌ಪುರ, ಮಧುರೈ, ಚಿತ್ರಕೂಟ, ಕಥ್‌ಗೋಡಂ, ಸೆಲ್ದಾ, ಮಡಗಾಂವ್, ಕೋಲ್ಕತ್ತಾ ಮತ್ತು ಉದಾಂಪುರಗಳನ್ನು ನೂತನ 18 ರೈಲುಗಳು ಸಂಪರ್ಕಿಸಲಿವೆ.
- ಮೊಬೈಲ್ ಫೋನ್ ಮೂಲಕ ರೈಲ್ವೆ ಟಿಕೇಟು ಕಾಯ್ದಿರಿಸುವ ಸವಲತ್ತು .
ಮುಖಪುಟ / ವಾರ್ತೆಗಳು












Click it and Unblock the Notifications