ಜಾತ್ಯತೀತ ದಳದ ಹೊಸ್ತಿಲಲ್ಲಿ ಬಿಜೆಪಿಯ ರಾಜಶೇಖರ ಮೂರ್ತಿ
ಜಾತ್ಯತೀತ ದಳದ ಹೊಸ್ತಿಲಲ್ಲಿ ಬಿಜೆಪಿಯ ರಾಜಶೇಖರ ಮೂರ್ತಿ
ದೇವೇಗೌಡರೊಂದಿಗೆ ಚರ್ಚೆ, ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಸಂಕಲ್ಪ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜಾತ್ಯತೀತ ಜನತಾದಳ ಪಕ್ಷವನ್ನು ಸೂಕ್ತ ಕಾಲದಲ್ಲಿ ಸೇರುತ್ತಿದ್ದೇನೆ. ಗೌಡರ ನಿಲುವು ಹಾಗೂ ಹೋರಾಟಗಳ ಕುರಿತು ತಮಗೆ ನಂಬಿಕೆಯಿದೆ ಎಂದು ರಾಜಶೇಖರ ಮೂರ್ತಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ಇದಕ್ಕೂ ಮುನ್ನ ಬೆಂಗಳೂರಿನ ಪದ್ಮನಾಭ ನಗರದಲ್ಲಿನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ - ರಾಜಶೇಖರಮೂರ್ತಿ ಹಾಗೂ ದೇವೇಗೌಡ ಒಂದು ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ದೇವೇಗೌಡರ ಆರೋಗ್ಯ ವಿಚಾರಿಸಲು ಅವರ ಮನೆಗೆ ಭೇಟಿನೀಡಿದ್ದೆ. ಈ ಭೇಟಿಯಲ್ಲಿ ಅನೇಕ ರಾಜಕೀಯ ವಿಷಯಗಳನ್ನೂ ಚರ್ಚಿಸಲಾಯಿತು. ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಕುರಿತು ನಮ್ಮಲ್ಲಿ ಸಹಮತವಿದೆ ಎಂದು ರಾಜಶೇಖರ ಮೂರ್ತಿ ಹೇಳಿದರು.
ಈ ನಡುವೆ ಚಾಮರಾಜಪೇಟೆ ಸಂಸದ ಹಾಗೂ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಅವರನ್ನು ಕೂಡ ಜಾತ್ಯತೀತ ಜನತಾದಳಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications