ಛಾಪಪಾಪ : ಆಂಧ್ರ ವಿಶೇಷ ತನಿಖಾ ದಳದಿಂದ ಮೂವರ ಬಂಧನ
ಛಾಪಪಾಪ : ಆಂಧ್ರ ವಿಶೇಷ ತನಿಖಾ ದಳದಿಂದ ಮೂವರ ಬಂಧನ
ಸಿಕ್ಕಿಬಿದ್ದ ಕರೀಂಲಾಲ ತೆಲಗಿಯ ತವರಿನ ವ್ಯಕ್ತಿ
ಬಂಧಿತರು ಛಾಪ ಹಗರಣದ ಪ್ರಮುಖ ಆರೋಪಿಗಳಾಗಿದ್ದು, ಛಾಪಪಾಪ ಸೂತ್ರಧಾರಿ ಕರೀಂ ಲಾಲ ತೆಲಗಿಯ ಜೊತೆ ನಿಕಟ ಸಂಪರ್ಕ ಹೊಂದಿದ್ದರೆಂದು ಆಂಧ್ರ ವಿಶೇಷ ತನಿಖಾ ದಳ ತಿಳಿಸಿದೆ. ಆರೋಪಿಗಳು ಯಾವಾಗ ಮತ್ತು ಎಲ್ಲಿ ಸಿಕ್ಕಿದರೆಂಬುದನ್ನು ತಿಳಿಸಲು ತನಿಖಾ ದಳ ನಿರಾಕರಿಸಿದೆ.
ತೆಲಗಿಯ ಮೂಲ ಊರಾದ ಕರ್ನಾಟಕದ ಘಾನಾಪುರಕ್ಕೇ ಸೇರಿದ ದಸ್ತಗಿರಿ ಎಂ, ಕೋಲ್ಕತ್ತ್ತಾದ ಆಶಿಸ್ ಚಕ್ರವರ್ತಿ ಮತ್ತು ಚೆನ್ನೈನ ಯತಿರಾಜ್ ಬಂಧಿತರು. ಮಂಗಳವಾರ, ಜ.27 ರಂದು ಬಂಧಿತ ದಸ್ತಗಿರಿಯನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ. ಉಳಿದಿಬ್ಬರನ್ನು ಇನ್ನೂ ಪ್ರಶ್ನಿಸಲಾಗುತ್ತಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications