ಬರದ ಬೀಡಿನಲ್ಲಿ 5,000 ಕೋಟಿ ರು. ಸಮಗ್ರಅಭಿವೃದ್ಧಿ ಯೋಜನೆ

ಬರದ ಬೀಡಿನಲ್ಲಿ 5,000 ಕೋಟಿ ರು. ಸಮಗ್ರಅಭಿವೃದ್ಧಿ ಯೋಜನೆ
ನಬಾರ್ಡ್‌ನಿಂದ ಸುಲಭ ದರದಲ್ಲಿ ಸಾಲ

ಬೆಂಗಳೂರು : 5,000 ಕೋಟಿ ರುಪಾಯಿಗಳ ನಬಾರ್ಡ್‌ ನೆರವಿನ ಯೋಜನೆಯಾಂದನ್ನು ರಾಜ್ಯದ 80 ಲಕ್ಷ ಹೆಕ್ಟೇರ್‌ ಬರ ಪೀಡಿತ ಪ್ರದೇಶಗಳ ಸಮಗ್ರ ಜಲಾನಯನ ಅಭಿವೃದ್ಧಿಗಾಗಿ ರಾಜ್ಯ ಸರಕಾರ ರೂಪಿಸಿದೆ.

ಮುಂದಿನ ಹತ್ತು ವರ್ಷಗಳಲ್ಲಿ ಜಾರಿಯಾಗಲಿರುವ ಈ ಯೋಜನೆಗೆ ಎಸ್‌.ಎಂ. ಕೃಷ್ಣ ಸರಕಾರ ಸದ್ಯವೇ ಅನುಮೋದನೆ ನೀಡುವ ನಿರೀಕ್ಷೆಯಿದೆ ಎಂದು ಅಭಿವೃದ್ಧಿ ಆಯುಕ್ತ ವಿಜಯ್‌ ಗೋರೆ ಪ್ರಕಟಿಸಿದರು. ಇತರ ಬ್ಯಾಂಕ್‌ಗಳು ಸಾಲ ನೀಡಲು ನೂರೆಂಟು ಷರತ್ತುಗಳನ್ನು ವಿಧಿಸುತ್ತವೆ. ಆದರೆ ನಬಾರ್ಡ್‌ ಸುಲಭ ದರದಲ್ಲಿ ಸಾಲ ನೀಡುತ್ತದೆ ಎಂದರು. ಅವರು ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ‘ಸಾಲ ವ್ಯವಸ್ಥೆ’ ಕುರಿತ ರಾಜ್ಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಶೇ 79 ರಷ್ಟು ರೈತರು ಮಳೆ ಅವಲಂಬಿತ ಕೃಷಿ ಮಾಡುತಿದ್ದಾರೆ. ಇವರಲ್ಲಿ ಶೇ. 1.7 ಮಾತ್ರ ದೊಡ್ಡ ರೈತರು. ರಾಜ್ಯ ಮೂರು ವರ್ಷದಿಂದ ಬರ ಪರಿಸ್ಥಿತಿ ಎದುರಿಸುತ್ತಿದೆ. ಪ್ರಸ್ತುತ 36ಕೋಟಿ ರೂಪಾಯಿ ಯೋಜನೆಯ ಜಲಾನಯನ ಅಭಿವೃದ್ಧಿ ಕಾರ್ಯಕ್ರಮ ಜಾರಿಯಲ್ಲಿದೆ. ಇದರಿಂದ ವಾರ್ಷಿಕ 2.2 ಹೆಕ್ಟೇರ್‌ ಭೂಪ್ರದೇಶ ಅಭಿವೃದ್ಧಿಯಾಗುತ್ತಿದೆ. ಈ ವೇಗದಲ್ಲಿ ಸಾಗಿದರೆ ಸಂಪೂರ್ಣ ಆಭಿವೃದ್ಧಿಗೆ 40ವರ್ಷ ಬೇಕಾಗುವುದು ಎಂದು ನುಡಿದರು.

ಚುನಾವಣೆಯ ಗಾಳಿಯಾಡನೆ ತೇಲಿ ಬರಬಹುದಾದ ಪ್ಯಾಕೆಜ್‌ಗಳು ಈಗ ಹಳ್ಳಿಯತ್ತ ಸಾಗುತ್ತಿವೆ ಅಲ್ವೇ???

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+